ನಸುಗೆಂದು ಬಣ್ಣದ ಆಕರ್ಷಕ ತುಟಿಗಳನ್ನು ಹೊಂದಬೇಕೆಂಬುದು ಎಲ್ಲರ ಬಯಕೆಯೂ ಹೌದು. ಅದಕ್ಕೆ ಮಳಿಗೆಯಲ್ಲಿ ಸಿಗುವ ಕ್ರೀಮ್ ಬಳಸುವ ಬದಲು ಮನೆಯಲ್ಲೇ ನೈಸರ್ಗಿಕ ವಿಧಾನವನ್ನು ಅನುಸರಿಸಬಹುದು.
ಒಂದು ಬಟ್ಟಲಲ್ಲಿ ದಾಳಿಂಬೆ ಬೀಜಗಳನ್ನು ಹಾಕಿ ಜಜ್ಜಿಕೊಳ್ಳಿ. ನಂತರ ಹಾಲಿನ ಕೆನೆಯೊಂದಿಗೆ ಬೆರೆಸಿ ತುಟಿಗಳಿಗೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ತುಟಿಗಳು ಹೊಳೆಯುತ್ತದೆ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತುಟಿಗಳ ಮೇಲೆ ಉಜ್ಜುವುದರಿಂದ ತುಟಿಗಳ ಅಂದ ಹೆಚ್ಚಾಗುತ್ತದೆ. ಕ್ಯಾರೆಟ್ ರಸ, ಬಿಟ್ರೂಟ್ ರಸವನ್ನು ತುಟಿಗಳ ಮೇಲೆ ಲೇಪಿಸಿ. ಸ್ವಲ್ಪ ಸಕ್ಕರೆಯನ್ನು ಆಲಿವ್ ಎಣ್ಣೆ ಅಥವಾ ಹಾಲಿನ ಕೆನೆಯೊಂದಿಗೆ ಬೆರೆಸಿ ತುಟಿಗಳ ಮೇಲೆ ಹಚ್ಚಿಕೊಳ್ಳಬೇಕು. ಇದರಿಂದ ತುಟಿಗಳ ನಿರ್ಜೀವ ತ್ವಚೆ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ತೇವವಾಗುತ್ತವೆ.
ಪ್ರತಿ ದಿನ ರಾತ್ರಿ ಮಲಗುವ ಮುಂಚೆ ನಿಂಬೆ ರಸ ಮತ್ತು ಗ್ಲಿಸರಿನ್ ಮಿಶ್ರಣವನ್ನು ತುಟಿಗಳಿಗೆ ಲೇಪಿಸಬೇಕು. ರಾತ್ರಿ ಪೂರ್ತಿ ಹಾಗೆ ಬಿಟ್ಟು ಮರುದಿನ ಬೆಳಗ್ಗೆ ತೊಳೆಯಬೇಕು. ಇದನ್ನು ವಾರಕ್ಕೊಮ್ಮೆ ಮಾಡಿ ನೋಡಿ, ಹೊಳೆಯುವ ತುಟಿಗಳು ನಿಮ್ಮದಾಗುತ್ತವೆ.