ಚಾಕಲೇಟ್ ಇಷ್ಟಪಡದವರಾರು, ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರಿಗೂ ಚಾಕೊಲೇಟ್ ಎಂದರೆ ಬಲು ಇಷ್ಟ. ಚಾಕೊಲೇಟ್ ತಯಾರಿಗೆ ಬಳಸುವ ಕೊಕೊ ಹಣ್ಣಿನಲ್ಲಿ ಸಮೃದ್ಧ ಪ್ರಮಾಣದ ವಿಟಮಿನ್, ಖನಿಜಗಳು ಇದ್ದು ಇವು ತ್ವಚೆಗೆ ಉತ್ತಮ ಅರೈಕೆ ನೀಡುತ್ತವೆ. ಇದನ್ನು ಬಳಸುವ ವಿಧಾನ ತಿಳಿಯೋಣ.
ಪಾತ್ರೆಗೆ ಕಾಲು ಕಪ್ ಕೊಕೊ ಪುಡಿ, ಕಾಲು ಕಪ್ ಜೇನು, 4 ಚಮಚ ಕಂದು ಸಕ್ಕರೆ ಹಾಕಿ ಮಿಶ್ರಣ ತಯಾರಿಸಿ. ಇದನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಪೂರ್ಣ ಒಣಗಿದ ಬಳಿಕ ಸಿಪ್ಪೆಯಂತೆ ಎಬ್ಬಿಸಿ ತೆಗೆಯಿರಿ. ತುಂಡಾಗುತ್ತಿದ್ದರೆ ಇನ್ನೂ ಸ್ವಲ್ಪ ಹೊತ್ತು ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಸ್ವಚ್ಛವಾದ, ಹತ್ತಿಯ ದಪ್ಪ ಟವೆಲ್ ನಿಂದ ಒತ್ತಿ ಒಣಗಿಸಿ.
ಬಳಿಕ ನಯವಾಗಿ ಮಸಾಜ್ ಮಾಡಿ. ಬೆರಳುಗಳನ್ನು ವೃತ್ತಾಕಾರದಲ್ಲಿ ತಿರುಗಿಸುತ್ತಾ ಮಸಾಜ್ ಮಾಡಿ. ಈಗ ನಿಮ್ಮ ತ್ವಚೆ ಹೊಳೆಯುವುದನ್ನು ನೋಡಿ. ನಿಮ್ಮ ವೃದ್ದಾಪ್ಯದ ಚಿಹ್ನೆಗಳನ್ನೂ ದೂರ ಮಾಡುವ ಶಕ್ತಿ ಇದಕ್ಕಿದೆ.