ಸೌಂದರ್ಯವನ್ನು ರಕ್ಷಿಸಿಕೊಳ್ಳುವುದು ಮತ್ತು ಹಾಳುಗೆಡಹುವುದು ನಮ್ಮ ಕೈಯಲ್ಲೇ ಇರುತ್ತದೆ. ಕೆಲವು ಅಭ್ಯಾಸಗಳನ್ನು ಕೈಬಿಡುವ ಮೂಲಕ ನಮ್ಮ ತ್ವಚೆಯನ್ನು ನಾವೇ ಕಾಪಾಡಿಕೊಳ್ಳಬಹುದು. ಹೇಗೆನ್ನುತ್ತೀರಾ?
ಫೇಶಿಯಲ್ ಸ್ಕ್ರಬ್ ಗಳು ನಮ್ಮ ತ್ವಚೆಯ ಮೇಲೆ ಬೀರುವ ಪ್ರಭಾವ ಅಪಾರ. ಇವುಗಳನ್ನು ತಯಾರು ಮಾಡುವ ವಿಧಾನ, ಬಳಕೆಯಾಗುವ ವಸ್ತುಗಳು ಮುಖದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಹೀಗಾಗಿ ಇವುಗಳನ್ನು ಬಳಸುವ ಮೊದಲು ಎಚ್ಚರಿಕೆ ವಹಿಸಿ.
ತ್ವಚೆಯ ಮೇಲೆ ಸತ್ತ ಜೀವಕೋಶಗಳ ನಿವಾರಣೆಗಾಗಿ ಅಡುಗೆ ಮನೆಯಲ್ಲಿ ಸಿಗುವ ಸಕ್ಕರೆಯನ್ನು ಮುಖದ ಮೇಲೆ ಹಚ್ಚಿಕೊಳ್ಳುತ್ತೀರಾ, ಮುಖದ ಭಾಗದ ಚರ್ಮ ಹೆಚ್ಚು ಸೂಕ್ಷ್ಮವಾದ್ದರಿಂದ ಸಕ್ಕರೆ ಕಾಳುಗಳು ಚರ್ಮಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಇದರಿಂದ ಅಲ್ಲಲ್ಲಿ ಕಿರಿಕಿರಿ, ಕೆರೆತ, ಕಲೆಗಳು ಮೂಡಬಹುದು. ನಿಂಬೆಹಣ್ಣಿನ ಜೊತೆ ಸಕ್ಕರೆ ಬೆರೆಸಿದರೆ ಬೆಳ್ಳಗಾಗಬೇಕೆಂಬ ಬಯಕೆಗೆ ತಿಲಾಂಜಲಿ ಕೊಟ್ಟಂತೆಯೇ…! ಕಾಫಿ ಹುಡಿಯನ್ನೂ ಮುಖಕ್ಕೆ ಬಳಸದಿರಿ.