ತುಟಿ ನಯವಾಗಿ ಹೊಳೆಯಬೇಕೆಂದರೆ ಇಲ್ಲಿದೆ ನೈಸರ್ಗಿಕ ಮದ್ದು

ಅಂದದ ತುಟಿ ಹೊಂದುವ ಬಯಕೆ ಎಲ್ಲರದ್ದು. ಅದಕ್ಕಾಗಿ ಹಲವು ಪ್ರಯೋಗಗಳನ್ನು ಮಾಡಿರುತ್ತೇವೆ. ನೈಸರ್ಗಿಕವಾಗಿ ತುಟಿಯ ಅಂದವನ್ನು ವೃದ್ಧಿಸುವ ವಿಧಾನವನ್ನು ತಿಳಿಯೋಣ. ನಾವು ಬಳಸುವ ರಾಸಾಯನಿಕಗಳಾದ ಲಿಪ್ಸ್ಟಿಕ್, ಲಿಪ್ ಗ್ಲೋಸ್ ಮುಂತಾದವು ರಾಸಾಯನಿಕ ಮಿಶ್ರಣಗಳಿಂದ ಕೂಡಿರುತ್ತದೆ.

ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ತುಟಿ ಕಪ್ಪು ಬಣ್ಣಕ್ಕೆ ತಿರುಗುವುದು ಸಹಜ. ಬಟ್ಟಲಲ್ಲಿ ದಾಳಿಂಬೆ ಬೀಜ ಹಾಕಿ ಅದನ್ನು ಚೆನ್ನಾಗಿ ಜಜ್ಜಿ. ಬಳಿಕ ಹಾಲಿನ ಕೆನೆಯೊಂದಿಗೆ ಬೆರೆಸಿ ತುಟಿಗಳಿಗೆ ಹಚ್ಚಿ. ಸ್ವಲ್ಪ ಸಮಯದ ಬಳಿಕ ತೆಗೆಯಿರಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತುಟಿಗಳ ಮೇಲೆ ಉಜ್ಜುವುದರಿಂದ ತುಟಿಗಳ ಅಂದ ಹೆಚ್ಚಾಗುತ್ತದೆ.

ಕ್ಯಾರೆಟ್ ರಸ, ಬಿಟ್ರೂಟ್ ರಸವನ್ನು ತುಟಿಗಳ ಮೇಲೆ ಲೇಪಿಸುವುದರಿಂದ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ರಾತ್ರಿ ಮಲಗುವ ಮುಂಚೆ ನಿಂಬೆ ರಸ ಮತ್ತು ಗ್ಲಿಸರಿನ್ ಮಿಶ್ರಣವನ್ನು ತುಟಿಗಳಿಗೆ ಲೇಪಿಸಿ, ಇದನ್ನು ರಾತ್ರಿ ಪೂರ್ತಿ ಬಿಟ್ಟು ಮರುದಿನ ಬೆಳಗ್ಗೆ ತೊಳೆಯಬೇಕು. ಈ ರೀತಿ ವಾರಕ್ಕೊಮ್ಮೆ ಮಾಡಿದರೆ ಹೊಳೆಯುವ ತುಟಿಗಳನ್ನು ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read