ಪ್ರತಿ ದಿನ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಬಂದರೆ ಹೀಗೊಮ್ಮೆ ಹೆಸರು ಬೇಳೆ ಸಾರು ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ.
ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ-1/2 ಕಪ್, ಉಪ್ಪು-1/2 ಟೇಬಲ್ ಸ್ಪೂನ್, ಜೀರಿಗೆ ಪುಡಿ- ¼ ಟೀ ಸ್ಪೂನ್, ಸಣ್ಣ ಲಿಂಬೆ ಹಣ್ಣು-1, 2-ಟೇಬಲ್ ಸ್ಪೂನ್ ತುಪ್ಪ, 1/2 ಕಪ್-ಕಾಯಿತುರಿ, 5-ಹಸಿಮೆಣಸು, ಸ್ವಲ್ಪ ಕೊತ್ತಂಬರಿ ಸೊಪ್ಪು, 2-ಟೊಮೆಟೊ, ಕರಿಬೇವು-ಸ್ವಲ್ಪ, ½ ಟಿ ಸ್ಪೂನ್- ಸಾಸಿವೆ, ¼ ಟೀ ಸ್ಪೂನ್ ಜೀರಿಗೆ, ಸಣ್ಣ ತುಂಡು-ಬೆಲ್ಲ, ಚಿಟಿಕೆ-ಅರಿಶಿನ, 4 ಕಪ್ –ನೀರು.
ಮಾಡುವ ವಿಧಾನ:
ಮೊದಲಿಗೆ ಹೆಸರುಬೇಳೆ ಚೆನ್ನಾಗಿ ತೊಳೆದು ಒಂದು ಅಗಲವಾದ ಪಾತ್ರೆಗೆ ಹಾಕಿ ನೀರು ಸೇರಿಸಿ ಬೇಯಿಸಿಕೊಳ್ಳಿ. ಇದು ಸ್ವಲ್ಪ ಬೇಯುತ್ತಾ ಇದ್ದಂತೆ ಅದಕ್ಕೆ ಟೊಮೆಟೊ, ಹಸಿಮೆಣಸು ಕತ್ತರಿಸಿ ಹಾಕಿ ಚಿಟಿಕೆ ಅರಿಸಿನ, ಕರಿಬೇವು ಸೇರಿಸಿ. ಹೆಸರುಬೇಳೆ, ಟೊಮೆಟೊ ಚೆನ್ನಾಗಿ ಬೇಯಲಿ. ನಂತರ ಉಪ್ಪು, ಜೀರಿಗೆ ಪುಡಿ, ಬೆಲ್ಲ ಕೂಡ ಸೇರಿಸಿ.