alex Certify ʼಅಜೀರ್ಣʼ ಸಮಸ್ಯೆ ದೂರವಾಗಲು ಇಲ್ಲಿದೆ ಜೀರಿಗೆ ನೀರು ಮಾಡುವ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಜೀರ್ಣʼ ಸಮಸ್ಯೆ ದೂರವಾಗಲು ಇಲ್ಲಿದೆ ಜೀರಿಗೆ ನೀರು ಮಾಡುವ ಸುಲಭ ವಿಧಾನ

ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇದ್ದಾಗ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಆಗ ಈ ಜೀರಿಗೆ ನೀರು ಮಾಡಿಕೊಂಡು ಕುಡಿದರೆ ಬೇಗನೆ ರಿಲೀಫ್ ಆಗುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮಾಡಿ ನೋಡಿ.

3 ಟೇಬಲ್ ಸ್ಪೂನ್ ಜೀರಿಗೆ ಯನ್ನು ಒಂದು ಪ್ಯಾನ್ ಗೆ ಹಾಕಿಕೊಂಡು ಅದು ಚಟಪಟ ಅನ್ನುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ 4 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. 20 ನಿಮಿಷಗಳ ಕಾಲ ಕುದಿಸಿಕೊಳ್ಳಿ. ನಂತರ ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.

ನಂತರ ಒಂದು ಗ್ಲಾಸ್ ಗೆ 4 ಐಸ್ ಕ್ಯೂಬ್ ಹಾಕಿಕೊಳ್ಳಿ. ನಂತರ ¼ ಲೋಟದಷ್ಟು ಮಾಡಿಟ್ಟುಕೊಂಡ ಜೀರಿಗೆ ನೀರನ್ನು ಗ್ಲಾಸ್ ಗೆ ಹಾಕಿಕೊಳ್ಳಿ. ನಂತರ 1 ಟೇಬಲ್ ಸ್ಪೂನ್ ಸಕ್ಕರೆ, ಸ್ವಲ್ಪ ಉಪ್ಪು, ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ. ನಂತರ ನೀರು ಹಾಕಿ ಒಂದು ಸ್ಪೂನಿನ ಸಹಾಯದಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಜೀರಿಗೆ ನೀರು ಸವಿಯಲು ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...