ತೂಕ ಇಳಿಸಲು ಬೆಳ್ಳುಳ್ಳಿ ಟೀ ಕುಡಿಯಬೇಕು. ಇದನ್ನು ತಯಾರಿಸುವುದು ಹೇಗೆಂದು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು 3-4 ಬೆಳ್ಳುಳ್ಳಿ ಎಸಳು, ಒಂದು ಲೋಟ ನೀರು, ಒಂದು ತುಂಡು ಶುಂಠಿ, ಜೇನುತುಪ್ಪ, ಒಂದು ಚಮಚ ಲಿಂಬೆರಸ. ನೀರು ಕುದಿಸಿ ಒಂದು ಕಪ್ ಗೆ ಹಾಕಿ,
ಇದಕ್ಕೆ ಒಂದು ತುಂಡು ಶುಂಠಿ ಹಾಕಿ. ಮೊದಲೇ ಜಜ್ಜಿ ಇಟ್ಟುಕೊಂಡ 3-4 ಎಸಲು ಬೆಳ್ಳುಳ್ಳಿ ಹಾಕಿ. ಈಗ ಲಿಂಬೆರಸ ಮತ್ತು ಜೇನುತುಪ್ಪ ಹಾಕಿ. ಸರಿಯಾಗಿ ಕಲಸಿಕೊಳ್ಳಿ ಮತ್ತು ಬೆಳ್ಳುಳ್ಳಿ ಟೀ ಕುಡಿಯಿರಿ.
ಬೆಳ್ಳುಳ್ಳಿ ಯಾವುದೇ ಅಡ್ಡಪರಿಣಾಮ ಮಾಡುವುದಿಲ್ಲ. ನೀವು ಇದನ್ನು ಅತಿಯಾಗಿ ಸೇವನೆ ಮಾಡದಿರಿ. ಬೆಳ್ಳುಳ್ಳಿಯು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ. ಇದರಲ್ಲಿ ಕೊಬ್ಬು ಕರಗಿಸುವ ಗುಣಗಳಿವೆ. ಹೃದಯ ಕಾಯಿಲೆಯ ಅಪಾಯಗಳನ್ನು ತಗ್ಗಿಸುತ್ತದೆ ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ.