ಕಬ್ಬಿನ ಹಾಲು ನಿಮ್ಮ ಅಚ್ಚುಮೆಚ್ಚಿನ ಪಾನೀಯವೇ…? ರಸ್ತೆ ಬದಿಯಲ್ಲಿ ಮಾಡಿ ಮಾರುವ ಜ್ಯೂಸ್ ಕುಡಿಯುವ ಮೊದಲು ಕೆಲವಷ್ಟು ಸಂಗತಿಗಳನ್ನು ಸ್ಪಷ್ಟೀಕರಿಸಿಕೊಳ್ಳಿ.
ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಇರುತ್ತಾನೆ. ಅವನೇ ಯಂತ್ರಕ್ಕೆ ಕಬ್ಬು ಹಾಕಿ ಆನ್ ಮಾಡಿ, ಹಾಲನ್ನು ಲೋಟಕ್ಕೆ ಹಾಕಿ ಕೊಡುತ್ತಾನೆ. ಹೀಗೆ ಎಲ್ಲವನ್ನೂ ಮುಟ್ಟುವ ವ್ಯಕ್ತಿ ಕೈಗೆ ಗ್ಲೌಸ್ ಕೂಡಾ ಹಾಕಿರುವುದಿಲ್ಲ. ಇವುಗಳನ್ನು ಕಡ್ಡಾಯವಾಗಿ ಗಮನಿಸಿ.
ಕಬ್ಬಿನ ಹಾಲನ್ನು ಮಾಡುವ ಯಂತ್ರಗಳನ್ನು ಸ್ವಚ್ಛ ಮಾಡಿರುವುದಿಲ್ಲ. ನಿಂಬೆಹಣ್ಣು, ಶುಂಠಿ ಅಥವಾ ಪುದೀನಾವನ್ನು ತೊಳೆಯದೆ ನೇರವಾಗಿ ಬಳಸುತ್ತಾರೆ.
ಕೆಂಪಾದ ಕಬ್ಬಿನಿಂದ ಮಾಡಿದ ಕಬ್ಬಿನ ರಸವನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಏಕೆಂದರೆ ಅದು ಹಾಳಾದ ಕಬ್ಬಿನ ರಸ. ಈ ರೀತಿಯ ಕಬ್ಬಿನ ಹಾಲನ್ನು ಸೇವನೆ ಮಾಡುವುದರಿಂದ ನಿಮಗೆ ಅತಿ ಸಾರ ಮತ್ತು ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳು ಬರಬಹುದು. ಐಸ್ ಗುಣಮಟ್ಟವೂ ಆರೋಗ್ಯ ಕೆಡಲು ಕಾರಣವಾಗಬಹುದು.