ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಬಾರಿಯಾದರೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಿರುತ್ತದೆ. ಬೇಸಿಗೆಯಲ್ಲಿ ಸಿಗುವ ಕರಬೂಜ ಹಣ್ಣಿನಲ್ಲಿ ಗ್ಯಾಸ್ಟ್ರಿಕ್ ನೊಂದಿಗೆ ಇನ್ನೂ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಇದೆ.
ದೇಹಕ್ಕೆ ತಂಪು ನೀಡುವುದರೊಂದಿಗೆ ಹಲವು ಉತ್ತಮ ಗುಣಗಳುಳ್ಳ ಕರಬೂಜ ಹಣ್ಣು ಗ್ಯಾಸ್ಟ್ರಿಕ್ ನಿವಾರಣಾ ಶಕ್ತಿಯನ್ನೂ ಹೊಂದಿದೆ. ಇದರಲ್ಲಿ ವಿಟಮಿನ್ ಸಿ, ಪೋಲಿಕ್ ಆಸಿಡ್, ಪೊಟ್ಯಾಸಿಯಂ ಹೇರಳವಾಗಿದ್ದು ಮೂಳೆಗಳನ್ನು ಗಟ್ಟಿಗೊಳಿಸುವ ಆಂಟಿ ಆಕ್ಸಿಡೆಂಟ್ ಗಳಿವೆ.
ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಶ್ವಾಸಕೋಶ, ಸ್ತನ ಕ್ಯಾನ್ಸರ್ ನಿಂದ ದೂರವಿರಬಹುದು, ಮಲಬದ್ಧತೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ.
ದೇಹ ತೂಕ ಇಳಿಸಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಹಣ್ಣು. ಖನಿಜಾಂಶವನ್ನು ಅಧಿಕವಾಗಿ ಹೊಂದಿರುವ ಈ ಹಣ್ಣು ರಕ್ತ ಸಂಚಾರ ಸುಗಮವಾಗಿ ನಡೆಯುವಂತೆ ಮಾಡಿ ಪಾರ್ಶವಾಯು ಬರದಂತೆ ನೋಡಿಕೊಳ್ಳುತ್ತದೆ.