ತ್ರಿಫಲ ಚೂರ್ಣ ಎಂದರೆ ಬೆಟ್ಟದ ನೆಲ್ಲಿಕಾಯಿ, ತಾರೆ ಕಾಯಿ, ಕರಕ ಕಾಯಿಗಳ ಮಿಶ್ರಣ. ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾದ ಇದನ್ನು ಮನೆಯಲ್ಲಿ ತಯಾರಿಸಲು ಕಷ್ಟವಾದರೆ ಆಯುರ್ವೇದದ ಔಷಧಾಲಯಗಳಿಂದಲೂ ತಂದು ಉಪಯೋಗಿಸಬಹುದು. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಪ್ರತಿದಿನ 1 ರಿಂದ 5 ಗ್ರಾಂ ತ್ರಿಫಲ ಚೂರ್ಣವನ್ನು ಪ್ರತಿಯೊಬ್ಬರು ಸೇವಿಸಬಹುದು. ಇದರಿಂದ ಕೆಮ್ಮು, ಕಫ, ಶೀತದಂತ ಸಮಸ್ಯೆಯಿಂದ ದೂರವಿರಬಹುದು.
ಅಜೀರ್ಣ ಅಥವಾ ಭೇದಿಯ ಸಂದರ್ಭದಲ್ಲಿ ಸ್ವಲ್ಪ ನೀರಿನ ಜೊತೆ 1 ಚಮಚ ಚೂರ್ಣವನ್ನು ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಬೇಕು.
ಮಲಬದ್ದತೆ ಆದಾಗ 5 ಗ್ರಾಂ ಚೂರ್ಣವನ್ನು ಜೇನು ತುಪ್ಪದ ಜೊತೆ ತಿಂದು ಅರ್ಧ ಲೋಟ ಹಾಲಿನ ಜೊತೆ ಕುಡಿದರೆ ಪರಿಹಾರವಾಗುತ್ತದೆ. ರಕ್ತ ಶುದ್ಧಿಯೊಂದಿಗೆ ಜೀರ್ಣಕ್ರಿಯೆ ಸಮಸ್ಯೆಯನ್ನು ಪರಿಹರಿಸುತ್ತದೆ.