ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಮಹಿಳೆಯರ ಮನಃಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.
ಕೆಲವು ಮಹಿಳೆಯರು ತುಂಬಾ ಕೋಪಗೊಳ್ಳುತ್ತಾರೆ. ಮತ್ತೆ ಕೆಲವು ಮಹಿಳೆಯರು ತುಂಬಾ ಪ್ರೀತಿಸುತ್ತಾರೆ. ಕೆಲವರಿಗೆ ಅತಿಯಾದ ನೋವು ಮತ್ತು ಸೆಳೆತವಿದ್ರೆ ಮತ್ತೆ ಕೆಲವರು ಆರಾಮವಾಗಿರುತ್ತಾರೆ. ವಾಸನೆ ಗ್ರಹಿಕೆಯಿಂದ ಹಿಡಿದು ಅನೇಕ ಸಂಗತಿಗಳಲ್ಲಿ ಬದಲಾವಣೆ ಕಾಣಬಹುದಾಗಿದೆ.
ಮುಟ್ಟಿನ ಸಮಯದಲ್ಲಾಗುವ ಹಾರ್ಮೊನ್ ಬದಲಾವಣೆಯಿಂದಾಗಿ ಅನೇಕರು ಸೃಜನಶೀಲರಾಗ್ತಾರೆ. ಸೂಪರ್ಸ್ಟಾರ್ ಅಂತೆ ವರ್ತಿಸಲು ಶುರು ಮಾಡ್ತಾರೆ. ಉಳಿದ ದಿನಗಳಿಗೆ ಹೋಲಿಸಿದ್ರೆ ಹಾರ್ಮೋನ್ ಬದಲಾದ ದಿನಗಳಲ್ಲಿ ಕೆಲಸ ಮಾಡಲು ಹೊಸ ಹುಮ್ಮಸ್ಸು,ಶಕ್ತಿ ಸಿಗುವುದುಂಟು.
ಕೆಲವೊಮ್ಮೆ ಅತಿ ಹೆಚ್ಚು ಮಾತು, ಕೆಲವೊಮ್ಮೆ ಅತಿ ಕಡಿಮೆ ಮಾತಿಗೂ ಇದೇ ಕಾರಣ. ಮುಟ್ಟಿನ ಸಮಯದಲ್ಲಿ ಮೆದುಳು ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳುತ್ತದೆ. ಆಗ ಎಂಥ ಕೆಲಸವನ್ನು ಕೂಡ ಆರಾಮವಾಗಿ ಮಾಡಿ ಮುಗಿಸುತ್ತಾರೆ ಮಹಿಳೆಯರು.
ಸಮಯದಲ್ಲಿ ಮುಗಿಸುವ ಆತುರ ಕೂಡ ಮುಟ್ಟಿನ ಸಮಯದಲ್ಲಾಗುತ್ತದೆ. ಮನೆ, ಕಚೇರಿ, ಮಕ್ಕಳು ಸೇರಿದಂತೆ ಎಲ್ಲ ಕೆಲಸವನ್ನು ಆಗ ಮಾಡಿ ಮುಗಿಸುವ ಶಕ್ತಿ ನಿಮಗೆ ಬಂದಿರುತ್ತದೆ.