ಕೆಸುವಿನ ಎಲೆಯಿಂದ ಪತ್ರೊಡೆ, ವಡೆ ತಯಾರಿಸಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?
ಕೆಸುವಿನ ಎಲೆಯಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಇದರಲ್ಲಿರುವ ವಿಟಮಿನ್ ಸಿ ಅಂಶವು ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ಕಣ್ಣಿನ ಅರೋಗ್ಯ ವನ್ನು ಕಾಪಾಡಬಲ್ಲ ಕೆಸುವಿನ ಎಲೆಗಳು ಅಂಧತ್ವಕ್ಕೆ ಕಾರಣವಾಗುವ ಕಣ್ಣಿನ ರೋಗವನ್ನು ತಡೆಯುತ್ತವೆ.
ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದು ಮಧುಮೇಹ ಬರದಂತೆ ತಡೆಯುತ್ತದೆ. ಕ್ಯಾಲ್ಸಿಯಂ ಸಮಸ್ಯೆಗೂ ಇದು ರಾಮಬಾಣ. ಮಾತ್ರೆ ಸೇವಿಸುವ ಬದಲು ನಿಯಮಿತವಾಗಿ ಈ ಸೊಪ್ಪನ್ನು ಆಹಾರದಲ್ಲಿ ಬಳಸಬಹುದು. ಜೀರ್ಣಕ್ರಿಯೆಯನ್ನು ಹೆಚ್ಚಿಸಿ ರಕ್ತ ಹೀನತೆಯನ್ನು ನಿವಾರಿಸುತ್ತದೆ.