ಲವಂಗ ಗರಂ ಮಸಾಲೆ ತಯಾರಿಸುವಾಗ ಬಳಸುವ ಒಂದು ಸಾಮಾಗ್ರಿ. ಯಾವುದೇ ಮಸಾಲೆಗೆ ಲವಂಗ ಬಳಸಿದರೆ ವಿಭಿನ್ನ ಘಮ ಪಡೆಯಬಹುದು.
ಹಲ್ಲು ನೋವಾದರೂ ಹಲ್ಲಿನೆಡೆಗೆ ಲವಂಗ ತುಂಡನ್ನು ಇಟ್ಟುಕೊಂಡು ನೋವು ನಿವಾರಕವಾಗಿ ಬಳಸುತ್ತೇವೆ. ಲವಂಗವನ್ನು ಸೇವಿಸುವುದರಿಂದ ಹಲವಾರು ಉಪಯೋಗಗಳಿವೆ.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಲವಂಗ ಹೆಚ್ಚಿಸುತ್ತದೆ. ಬಿಳಿ ರಕ್ತಕಣಗಳ ಪ್ರಮಾಣವನ್ನು ಹೆಚ್ಚಿಸುವ ಇವು ವಿಟಮಿನ್ ಸಿಯನ್ನೂ ಒಳಗೊಂಡಿದೆ. ಮಧುಮೇಹಿಗಳು ಬೆಳಗೆದ್ದು ಚಿಟಿಕೆ ಲವಂಗ ಹುಡಿಯನ್ನು ಬಾಯಿಗೆ ಹಾಕಿಕೊಳ್ಳುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಕೊಲೆಸ್ಟ್ರಾಲ್ ಇಳಿಸುವಲ್ಲಿಯೂ ಇದರ ಪಾತ್ರ ಮಹತ್ವದ್ದು.
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಪೋಷಕಾಂಶಗಳು ಇದರಲ್ಲಿದ್ದು ಆಯುರ್ವೇದ ಔಷಧ ಪ್ರಕಾರಗಳಲ್ಲಿ ಲವಂಗಕ್ಕೆ ಮೇಲ್ದರ್ಜೆಯ ಸ್ಥಾನವಿದೆ. ಮಲಬದ್ಧತೆಯನ್ನು ತಡೆಯಲು ಇದು ನೆರವಾಗುತ್ತದೆ. ಇದನ್ನು ಪುಡಿ ಮಾಡಿ ಜೇನಿನೊಂದಿಗೆ ಸೇವಿಸಬೇಕು.
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು ರಕ್ತವನ್ನು ತೆಳುವಾಗಿಸುವ ಗುಣ ಹೊಂದಿದೆ. ಆಹಾರದ ರೂಪದಲ್ಲಿ ವಾರಕ್ಕೆರಡು ಬಾರಿ ಲವಂಗ ಸೇವಿಸುವುದರಿಂದ ದೇಹವನ್ನು ಬೆಚ್ಚಗಿಡಬಹುದು.