ಇಲ್ಲಿದೆ ಪಾರಿಜಾತದಿಂದಾಗುವ ಆರೋಗ್ಯ ಪ್ರಯೋಜನಗಳು

ಪಂಚವೃಕ್ಷಗಳಲ್ಲಿ ಒಂದೆಂದು ಹೆಸರು ಪಡೆದಿರುವ ಪಾರಿಜಾತ ಸುಗಂಧಿತ ಪುಷ್ಪಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ರಾತ್ರಿ ವೇಳೆ ಅರಳುವ ಈ ಹೂವಿನ ಕಂಪು ಮೂಗಿಗೆ ಹಿತ.

ಜಾಂಡೀಸ್ ಮತ್ತು ಮಲಬದ್ಧತೆ ಸಮಸ್ಯೆಗೆ ಪಾರಿಜಾತ ಎಲೆಯ ಔಷಧ ಬಳಸುತ್ತಾರೆ. ಕೀಲುನೋವು, ತಲೆಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರಗಳಿಗೆ ಪಾರಿಜಾತವನ್ನು ಔಷಧವಾಗಿ ಬಳಸುತ್ತಾರೆ.

6-7 ಎಲೆಗಳನ್ನು ತೆಗೆದು ಜಜ್ಜಿ ಕುದಿಸಿ ಕಷಾಯ ರೂಪದಲ್ಲಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ನಿರ್ವಹಿಸುತ್ತದೆ. ಇದರ ಬೀಜದ ಪುಡಿಯನ್ನು ಚರ್ಮ ಸಂಬಂಧಿ ಸಮಸ್ಯೆಗೆ ಬಳಸುತ್ತಾರೆ.

ಇದರ ಕಷಾಯ ಸೇವನೆಯಿಂದ ಕೀಲುನೋವು ದೂರವಾಗುತ್ತದೆ. ಮನೆಯಂಗಳದಲ್ಲಿರುವ ಪಾರಿಜಾತ ಗಿಡವನ್ನು ಹಾದು ಬರುವ ಸುಗಂಧವೂ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉಪಕಾರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read