ಮಹಿಳೆಯರ ಕೆಲ ಸಮಸ್ಯೆಗಳಲ್ಲಿ ಖಾಸಗಿ ಅಂಗದ ತುರಿಕೆಯೂ ಒಂದು. ಯೋನಿ ತುರಿಕೆಗೆ ಅನೇಕ ಕಾರಣಗಳಿವೆ. ಸ್ವಚ್ಛತೆ ಬಹುಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲ ಯೋನಿ ತುರಿಕೆಗೆ ಒತ್ತಡವೂ ಕಾರಣ.
ವರದಿಯೊಂದರ ಪ್ರಕಾರ, ದೈಹಿಕ ಮತ್ತು ಭಾವನಾತ್ಮಕ ಒತ್ತಡವು ಯೋನಿ ತುರಿಕೆ ಮತ್ತು ಕಿರಿಕಿರಿಗೆ ಕಾರಣವಾಗುತ್ತದೆ. ಇದು ತುಂಬಾ ಸಾಮಾನ್ಯವಲ್ಲ. ಒತ್ತಡವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿದಾಗ ಇದು ಸಂಭವಿಸಬಹುದು. ರೋಗ ನಿರೋಧಕ ಶಕ್ತಿ ಒತ್ತಡದಿಂದ ಕಡಿಮೆಯಾಗ್ತಿದ್ದಂತೆ ಸೋಂಕು ಹೆಚ್ಚಿನ ಅಪಾಯವನ್ನುಂಟು ಮಾಡಲು ಶುರು ಮಾಡುತ್ತದೆ. ತುರಿಕೆ ಕಾಣಿಸಿಕೊಳ್ಳುತ್ತದೆ.
ಒತ್ತಡ ಪ್ರತಿ ಬಾರಿಯೂ ಯೋನಿಯ ತುರಿಕೆಗೆ ಕಾರಣವಾಗುವುದಿಲ್ಲ. ಯೋನಿಯ ತುರಿಕೆಗೆ ರೇಜರ್ ಬಳಕೆ, ಬಿಗಿಯಾದ ಒಳ ಉಡುಪು ಕೂಡ ಕಾರಣವಾಗಬಹುದು. ಅತಿಯಾದ ಬೆವರಿನಿಂದ, ಪಾಲುದಾರರೊಂದಿಗೆ ಸಂಬಂಧವನ್ನು ಬೆಳೆಸುವ ಕಾರಣ, ಮುಟ್ಟಿನ ಸಮಯ, ಯೀಸ್ಟ್ ಸೋಂಕು ಈವೆಲ್ಲವೂ ಕಾರಣವಾಗುತ್ತದೆ. ಯೋನಿಯ ಸ್ವಚ್ಛತೆ ಬಹಳ ಮುಖ್ಯ. ಬೇವಿನ ಎಲೆ ನೀರಿನಿಂದ ಯೋನಿ ಸ್ವಚ್ಛಗೊಳಿಸುವುದು ಪರಿಣಾಮಕಾರಿ.