ನಿಸರ್ಗ ಸಹಜವಾಗಿ ಸಿಗುವ ಜೇನಿನ ಉಪಯೋಗಗಳು ಲೆಕ್ಕವಿಲ್ಲದಷ್ಟು. ದೇಹಕ್ಕೆ ಸಂಜೀವಿನಿಯಾದ ಜೇನಿನಿಂದ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಹಾಗಾದರೆ ಜೇನುತುಪ್ಪ ಯಾವ ರೀತಿ ಬಳಸಿದರೆ ನಮ್ಮ ತ್ವಚೆಗೆ ಉಪಯುಕ್ತ ಎಂಬುದನ್ನು ನೋಡೋಣ
ಜೇನುತುಪ್ಪಕ್ಕೆ ಅರ್ಧ ಚಮಚ ಬಾದಾಮಿ ಎಣ್ಣೆ ಬೆರೆಸಿ ಫೇಸ್ ಪ್ಯಾಕ್ ಮಾಡಿ ಅರ್ಧ ಗಂಟೆ ಬಳಿಕ ತಣ್ಣಗಿನ ನೀರಿನಲ್ಲಿ ತೊಳೆಯುವುದರಿಂದ ತ್ವಚೆ ಹೊಳೆಯುತ್ತದೆ. ಇದು ಫೇಶಿಯಲ್ ನ ಪರಿಣಾಮ ಬೀರುತ್ತದೆ. ಬಾದಾಮಿ ಎಣ್ಣೆ ಬದಲಿಗೆ ತೆಂಗಿನೆಣ್ಣೆಯನ್ನೂ ಬಳಸಬಹುದು.
ಅರ್ಧ ಕಪ್ ಪಪ್ಪಾಯದ ತಿರುಳಿಗೆ 2 ಚಮಚ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯುವುದರಿಂದ ಸೂರ್ಯನ ಕಿರಣದಿಂದ ಮುಂಕಾದ ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ.
ಜೇನುತುಪ್ಪಕ್ಕೆ ಕಡಲೆಹಿಟ್ಟು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಂಡು 20 ನಿಮಿಷಗಳ ಬಳಿಕ ತೊಳೆದುಕೊಂಡರೆ ಮುಖ ಕಾಂತಿಯುತವಾಗುತ್ತದೆ.