ಕಾಫಿ ಅಥವಾ ಟೀ ಕುಡಿಯದೆ ಬಹುತೇಕ ಮಂದಿಗೆ ಬೆಳಗಾಗದು ಇಲ್ಲವೇ ಹೊತ್ತು ಹೋಗದು. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಈ ಪಾನೀಯಗಳಿಗೆ ಅಡಿಕ್ಟ್ ಆಗಿದ್ದೇವೆ. ಇವುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು ಸೈಡ್ ಎಫೆಕ್ಟ್ ಗಳೂ ಇವೆ. ಅದನ್ನು ಕೊಂಚ ಕಡಿಮೆಗೊಳಿಸಲು ಸಕ್ಕರೆಯ ಬದಲು ಬೆಲ್ಲ ಬಳಸಬಹುದು.
ಸಕ್ಕರೆ ಹಾಗೂ ಬೆಲ್ಲ ಎರಡನ್ನೂ ಕಬ್ಬಿನಿಂದಲೇ ತಯಾರಿಸಿದ್ದರೂ ಅವೆರಡರ ಮಧ್ಯೆ ಭಾರಿ ವ್ಯತ್ಯಾಸವಿದೆ. ಬೆಲ್ಲದ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ. ಮಲಬದ್ಧತೆ ಸಮಸ್ಯೆಯನ್ನೂ ಇದು ನಿವಾರಿಸುತ್ತದೆ.
ಸಾಮಾನ್ಯ ಶೀತ, ಹೊಟ್ಟೆ ಉಬ್ಬರಿಕೆ, ಚರ್ಮ ಒಣಗುವಿಕೆ ಮೊದಲಾದ ಸಮಸ್ಯೆಗಳಿಗೆ ಬೆಲ್ಲ ದಿವ್ಯೌಷಧ. ಬೇಸಿಗೆಯ ಧಗೆ ಕಡಿಮೆ ಮಾಡಲೆಂದು ನಾವು ನೀರಿನ ಜೊತೆ ಬೆಲ್ಲದ ತುಂಡನ್ನು ಸೇವಿಸುತ್ತೇವೆ. ಇದಕ್ಕೆ ಬಾಯಾರಿಕೆಯನ್ನು ಕಡಿಮೆಗೊಳಿಸಲು ವಿಶೇಷ ಶಕ್ತಿ ಇದೆ. ಹಾಗಾಗಿ ಚಹಾ – ಕಾಫಿಗೂ ಇದನ್ನು ಬಳಸಿ ಬೆಲ್ಲದ ಉಪಯೋಗವನ್ನು ಪಡೆದುಕೊಳ್ಳಬಹುದು.