ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬವನ್ನು ಸಂತೋಷವಾಗಿ ಆಚರಿಸಲು ಇಷ್ಟಪಡ್ತಾರೆ. ಅದಕ್ಕಾಗಿ ಅನೇಕ ದಿನಗಳಿಂದ ತಯಾರಿ ನಡೆಸುತ್ತಾರೆ. ಶಾಸ್ತ್ರದಲ್ಲೂ ಹುಟ್ಟುಹಬ್ಬ ಹೇಗೆ ಆಚರಿಸಬೇಕು ಎನ್ನುವ ಬಗ್ಗೆ ಹೇಳಲಾಗಿದೆ. ಅದ್ರ ಪ್ರಕಾರ ಹುಟ್ಟುಹಬ್ಬ ಆಚರಿಸಿದ್ರೆ ಆರೋಗ್ಯ ವೃದ್ಧಿ ಜೊತೆಗೆ ಭಾಗ್ಯದ ಬಾಗಿಲು ತೆರೆಯುತ್ತದೆ.
ಹುಟ್ಟುಹಬ್ಬದ ದಿನ ಅಪ್ಪಿತಪ್ಪಿಯೂ ದೀಪವನ್ನು ಆರಿಸಬೇಡಿ. ದೀಪ ಆರಿಸುವುದು ಕತ್ತಲೆಯ ಸಂಕೇತ. ನರಕ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಕೆಲವರು ಹುಟ್ಟು ಹಬ್ಬದಂದು ಮಾಂಸ, ಮದ್ಯ ಸೇವನೆ ಮಾಡ್ತಾರೆ. ಇದು ತಪ್ಪು. ಮಾಂಸ ಸೇವನೆ, ಮದ್ಯಪಾನ ಪಾಪ. ಇದು ವರ್ಷಪೂರ್ತಿ ವಿವಾದ, ರೋಗಕ್ಕೆ ಕಾರಣವಾಗುತ್ತದೆ.
ಹುಟ್ಟುಹಬ್ಬದ ದಿನ ಅಪ್ಪಿತಪ್ಪಿಯೂ ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದು. ಇದು ಗ್ರಹದೋಷಕ್ಕೆ ಕಾರಣವಾಗುತ್ತದೆ. ಹುಟ್ಟುಹಬ್ಬದಲ್ಲಿ ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಹಾಕಬೇಕು.
ಜನ್ಮದಿನದಂದು ತಂದೆ-ತಾಯಿ, ಇಷ್ಟದ ದೇವರ ಆರಾಧನೆ ಮಾಡಬೇಕು. ತಂದೆ-ತಾಯಿ ಪಾದಕ್ಕೆ ನಮಿಸಬೇಕು.
ಹುಟುಹಬ್ಬದ ದಿನದಂದು ಉಪಯುಕ್ತರಿಗೆ ವಸ್ತುಗಳನ್ನು, ಹಣವನ್ನು ದಾನಮಾಡಿ. ಇದ್ರಿಂದ ಗ್ರಹದೋಷ ದೂರವಾಗುತ್ತದೆ. ಖುಷಿ ಪ್ರಾಪ್ತಿಯಾಗುತ್ತದೆ.