ನಮ್ಮ ದೇಹದಲ್ಲಿನ ರಕ್ತ ಶುದ್ಧಿ ಆಗದಿದ್ದರೆ ಸಾಕಷ್ಟು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮೊಡವೆ ಸಮಸ್ಯೆ ಕೂಡ ಕಾಡುತ್ತದೆ. ಆಗಾಗ ನಮ್ಮ ರಕ್ತ ಶುದ್ಧಿಕರಣಗೊಳಿಸಿಕೊಂಡರೆ ಕಾಯಿಲೆಗಳಿಂದ ದೂರವಾಗಬಹುದು. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ರಕ್ತವನ್ನು ಶುದ್ಧಿಕರಣಗೊಳಿಸಿಕೊಳ್ಳಬಹುದು.
ಹಾಗಲಕಾಯಿ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದು ರಕ್ತವನ್ನು ಶುದ್ಧಿಕರಣ ಮಾಡಲು ಉತ್ತಮವಾದ ಮನೆಮದ್ದಾಗಿದೆ. ಹಾಗಲಕಾಯಿ ಗೊಜ್ಜು, ಪಲ್ಯ ಮಾಡಿಕೊಂಡು ಆಗಾಗ ಸೇವಿಸುವುದರಿಂದ ದೇಹದಲ್ಲಿನ ಟಾಕ್ಸಿನ್ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿ ಕೂಡ ರಕ್ತ ಶುದ್ಧಿಕರಣ ಮಾಡುವ ಗುಣ ಹೊಂದಿದೆ. ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಗೆ 2 ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ತಿನ್ನಿ. ತಿಂದಾದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ರಕ್ತ ಶುದ್ಧಿಯಾಗುತ್ತದೆ.
ಇನ್ನು ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಗೆ 1 ಟೇಬಲ್ ಸ್ಪೂನ್ ನಷ್ಟು ಬೆಳ್ಳುಳ್ಳಿ ಪೇಸ್ಟ್, 1 ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ರಕ್ತ ಶುದ್ಧಿಯಾಗುವುದರ ಜತೆಗೆ ಮುಖವೂ ಕಾಂತಿಯುತವಾಗುತ್ತದೆ.