ಅರಿಶಿನದ ಹಾಲನ್ನು ಔಷಧಿ ರೂಪದಲ್ಲಿ ಸೇವಿಸಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು. ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಆದ್ರೆ ಸಾಕಷ್ಟು ಔಷಧಿ ಗುಣವಿರುವ ಅರಿಶಿನದ ಹಾಲು ಎಲ್ಲರಿಗೂ ಒಳ್ಳೆಯದಲ್ಲ. ಕೆಲವೊಂದು ಅನಾನುಕೂಲಗಳೂ ಇದರಲ್ಲಿವೆ.
ಲಿವರ್ ಸಮಸ್ಯೆ : ಯಕೃತ್ತು ದೊಡ್ಡದಾಗಿರುವ ಹಾಗೂ ಯಕೃತ್ತು ಸಮಸ್ಯೆಯಿಂದ ಬಳಲುತ್ತಿರುವ ಜನರು ಅರಿಶಿನ ಹಾಲನ್ನು ಸೇವಿಸಬಾರದು.
ಅಲರ್ಜಿ ಸಮಸ್ಯೆ : ಕೆಲವರಿಗೆ ಮಸಾಲೆ ಪದಾರ್ಥ ಅಲರ್ಜಿಯನ್ನುಂಟು ಮಾಡುತ್ತದೆ. ಅಲರ್ಜಿ ಸಮಸ್ಯೆಯಿಂದ ಬಳಲುವವರು ಅರಿಶಿನದಿಂದ ದೂರ ಇರುವುದು ಒಳ್ಳೆಯದು.
ಗರ್ಭಿಣಿ : ಗರ್ಭಿಣಿಯಾದವಳು ಅರಿಶಿನದ ಹಾಲನ್ನು ಸೇವಿಸಬಾರದು. ಗರ್ಭಾಶಯ ಕುಗ್ಗುವಿಕೆ, ಗರ್ಭಕೋಶದ ಸಮಸ್ಯೆ ಎದುರಾಗುತ್ತದೆ.
ರಕ್ತ ಹೀನತೆಯುಳ್ಳವರು : ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿನ ಸೇವನೆ ನಿಲ್ಲಿಸುವುದು ಒಳ್ಳೆಯದು.
ಶಸ್ತ್ರಚಿಕಿತ್ಸೆ : ಶಸ್ತ್ರಚಿಕಿತ್ಸೆ ನಂತ್ರವೂ ಅರಿಶಿನ ಬಳಸಬಾರದು. ಶಸ್ತ್ರಚಿಕಿತ್ಸೆಯಾದವರು ಅರಿಶಿನ ಸೇವನೆ ಮಾಡಿದ್ರೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಾಗುತ್ತದೆ.