ಅಂಜೂರ ಸೇವನೆಯಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಡ್ರೈಫ್ರೂಟ್ಸ್ ತಿನ್ನುವುದರಿಂದ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ನಮ್ಮ ಜೀರ್ಣಕ್ರೀಯೆ ಕೂಡ ಸರಾಗವಾಗುತ್ತದೆ. ಮಕ್ಕಳ ಸ್ಯಾಕ್ಸ್ ಡಬ್ಬದಲ್ಲಿ ಇದನ್ನು ಹಾಕಿ ಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ. ಇಂದು ಒಣ ಅಂಜೂರ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂಬುದನ್ನು ತಿಳಿಯೋಣ.

ಇದರಲ್ಲಿ ನಾರಿನಾಂಶ ಅಧಿಕವಿರುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ಸೇವಿಸುವುದರಿಂದ ಸಾಕಷ್ಟು ಸಹಾಯವಾಗಲಿದೆ.

ಇನ್ನು ಇದರಲ್ಲಿ ಕ್ಯಾಲ್ಸಿಯಂ ಅಂಶ ಕೂಡ ಹೆಚ್ಚಿದೆ. ಮೂಳೆಯ ಸದೃಢಕ್ಕೆ ಇದು ಸಹಾಯ ಮಾಡುತ್ತದೆ. ದಿನಾ ಸೇವಿಸುವುದರಿಮದ ಮೂಳೆ ಸವೆತ, ಗಂಟು ನೋವು ಕೂಡ ಕಡಿಮೆಯಾಗುತ್ತದೆ.

ಅಂಜೂರದಲ್ಲಿ ಪೋಟ್ಯಾಷಿಯಂ ಅಂಶ ಜಾಸ್ತಿ ಇದೆ. ಹಾಗಾಗಿ ಅಧಿಕ ರಕ್ತದೊತ್ತಡವಿರುವವರು ಇದನ್ನು ಸೇವಿಸುವುದರಿಂದ ಬಿಪಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ತೂಕ ಇಳಿಸಿಕೊಳ್ಳುವವರಿಗೆ ಇದು ತುಂಬಾನೇ ಸಹಾಯಕಾರಿಯಾಗಿದೆ. ವರ್ಕೌಟ್ ಮಾಡಿದ ನಂತರ ಇದನ್ನು ಸೇವಿಸಿದರೆ ಶಕ್ತಿ ದೊರಕುತ್ತದೆ. ಹಾಗೇ ಬೆಳಿಗ್ಗೆ ಕೂಡ ಇದನ್ನು ತಿಂಡಿ ಜತೆ ತಿನ್ನಬಹುದು.

ಇದನ್ನು ದಿನಾ ಸೇವಿಸುವುದರಿಂದ ಹೃದಯಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read