ಸೂರ್ಯನ ಬೆಳಕಿಗೆ ಅತೀಯಾಗಿ ಒಡ್ಡಿಕೊಳ್ಳುವಿಕೆ, ಅಲರ್ಜಿ ಹಾಗೂ ಇತರೆ ಕಾರಣಗಳಿಂದ ಕೆಲವರಿಗೆ ಕುತ್ತಿಗೆ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ.
ಕೆಲವೊಮ್ಮೆ ನಾವು ಹಾಕುವ ಸರದಿಂದ, ಕೆಮಿಕಲ್ ಯುಕ್ತ ಕ್ರಿಂಗಳಿಂದ ಕೂಡ ಈ ಸಮಸ್ಯೆ ಎದುರಾಗುತ್ತದೆ. ಇನ್ನು ಕೆಲವೊಮ್ಮೆ ಸರಿಯಾಗಿ ಸ್ವಚ್ಛ ಮಾಡಿಕೊಳ್ಳದೇ ಇರುವಿಕೆ ಕೂಡ ಈ ಕಲೆಗೆ ಕಾರಣವಾಗುತ್ತದೆ. ಇದನ್ನು ಕೆಲವೊಂದು ಮನೆ ಮದ್ದಿನಿಂದ ಗುಣಪಡಿಸಿಕೊಳ್ಳಬಹುದು.
ಆ್ಯಪಲ್ ಸೈಡರ್ ವಿನೇಗರ್ ಇದು ಚರ್ಮದ ಪಿಎಚ್ ಲೆವಲ್ ಅನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. 2 ಟೇಬಲ್ ಚಮಚ ಆ್ಯಪಲ್ ಸೈಡರ್ ವಿನೇಗರ್ ಗೆ 4 ಟೇಬಲ್ ಚಮಚ ನೀರನ್ನು ಮಿಕ್ಸ್ ಮಾಡಿ. ಹತ್ತಿಯ ಉಂಡೆಯ ಸಹಾಯದಿಂದ ಇದನ್ನು ಕುತ್ತಿಗೆಯ ಸುತ್ತ ಹಚ್ಚಿಕೊಳ್ಳಿ. ಹತ್ತು ನಿಮಿಷ ಹಾಗೇಯೇ ಬಿಡಿ. ನಂತರ ಶುದ್ಧವಾದ ನೀರಿನಿಂದ ತೊಳೆಯಿರಿ. ಒಂದು ದಿನ ಬಿಟ್ಟು ಒಂದು ದಿನ ಇದನ್ನು ಮಾಡಿ, ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ.
2 ಚಮಚ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಟೊಮೆಟೋ ರಸವನ್ನು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಕುತ್ತಿಗೆಯ ಸುತ್ತ ಹಚ್ಚಿಕೊಂಡು 20 ನಿಮಿಷ ಹಾಗೇಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ 3 ಬಾರಿ ಮಾಡಿ. ಕ್ರಮೇಣ ಕಲೆಗಳು ಮಾಯವಾಗುತ್ತದೆ.
3 ಟೇಬಲ್ ಸ್ಪೂನ್ ನಷ್ಟು ಬೇಕಿಂಗ್ ಸೋಡಾ ತೆಗೆದುಕೊಳ್ಳಿ. ಅದಕ್ಕೆ ಬೇಕಾಗುವಷ್ಟು ನೀರು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕತ್ತಿನ ಸುತ್ತ ಹಚ್ಚಿಕೊಳ್ಳಿ. ಇದು ಪೂರ್ತಿ ಒಣಗಿದ ನಂತರ ನಿಧಾನಕ್ಕೆ ಸ್ಕ್ರಬ್ ಮಾಡಿ. ಆಮೇಲೆ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ದಿನ ಇದನ್ನು ಮಾಡಿದರೆ ಫಲಿತಾಂಶ ಬೇಗ ಸಿಗುತ್ತದೆ.