ಬೆಳಗಿನ ತಿಂಡಿಗೆ ಬೇಗನೆ ತಯಾರಾಗುವ ತಿಂಡಿಗಳಲ್ಲಿ ಒಂದು ಚಿತ್ರಾನ್ನ. ನಿಂಬೆ ಹುಳಿ, ಟೊಮೆಟೊ ಹೀಗೆ ಹಲವು ಬಗೆಯ ಚಿತ್ರಾನ್ನ ಮಾಡುವುದು ತಿಳಿದಿದೆ. ಹಾಗೇ ಕಾಯಿ ಹಾಲಿನಲ್ಲೂ ಫಟಾಫಟ್ ಚಿತ್ರಾನ್ನ ತಯಾರಿಸಬಹುದು ಗೊತ್ತಾ. ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಅಕ್ಕಿ – 1/2 ಕೆಜಿ
ತೆಂಗಿನಕಾಯಿ – 1
ಅರಿಶಿಣ – 1/2 ಚಮಚ
ಗೋಡಂಬಿ ದ್ರಾಕ್ಷಿ – 3 ಚಮಚ
ಹಸಿಮೆಣಸಿನಕಾಯಿ – 4
ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೇಬೇಳೆ, ಎಣ್ಣೆ, ಉಪ್ಪು,
ಮಾಡುವ ವಿಧಾನ
ಮೊದಲು ಉದುರುದುರಾಗಿ ಅನ್ನವನ್ನು ತಯಾರಿಸಿಕೊಳ್ಳಬೇಕು. ನಂತರ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಹಾಲನ್ನು ಹಿಂಡಿಟ್ಟುಕೊಳ್ಳಬೇಕು. ನಂತರ ಬಾಣಲೆಯಲ್ಲಿ ಐದಾರು ಚಮಚ ಎಣ್ಣೆಯನ್ನು ಹಾಕಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೇಬೇಳೆ, ಕರಿಬೇವಿನ ಒಗ್ಗರಣೆ ಮಾಡಿಕೊಳ್ಳಬೇಕು.
ಆನಂತರ ಅದಕ್ಕೆ ಗೋಡಂಬಿ ದ್ರಾಕ್ಷಿ, ಉಪ್ಪು, ಕಾಯಿ ಹಾಲು ಹಾಕಿ ಸಣ್ಣ ಉರಿಯಲ್ಲಿ ಐದಾರು ನಿಮಿಷ ಕಾಯಲು ಬಿಡಬೇಕು. ತಣ್ಣಗಾದ ನಂತರ ಅನ್ನದ ಜೊತೆ ಕಲಸಿದರೆ ಕಾಯಿ ಹಾಲಿನ ಚಿತ್ರಾನ್ನ ಸವಿಯಲು ಸಿದ್ಧ.