ಅನುವಂಶಿಯವಾಗಿ ಇರಲಿ, ಒತ್ತಡದ ಕಾರಣದಿಂದಾಗಿರಲಿ ಒಟ್ಟಾರೆ ಸಾಕಷ್ಟು ಜನರಿಗೆ ಬಾಲ್ಯದಲ್ಲಿಯೇ ನೆರೆಗೂದಲ ಸಮಸ್ಯೆ ಎದುರಾಗುತ್ತದೆ.
ಆದರೆ ಸ್ವಲ್ಪ ಮಟ್ಟಿಗೆ ಜಾಗರೂಕತೆ ವಹಿಸಿದರೆ ಆ ಸಮಸ್ಯೆಯಿಂದ ದೀರ್ಘಕಾಲ ದೂರವಾಗಬಹುದು. ಚಿಕ್ಕಂದಿನಿಂದಲೇ ಕೆಲ ಸಲಹೆಗಳನ್ನು ಅನುಸರಿಸಲು ಆರಂಭಿಸಬೇಕು.
* 4 ಒಣ ನೆಲ್ಲಿಕಾಯಿ ತೆಗೆದುಕೊಂಡು ಅವುಗಳನ್ನು ಒಂದು ಕಪ್ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಸಿದ್ಧವಾದ ಎಣ್ಣೆಯನ್ನು ಸಂಗ್ರಹಿಸಿಟ್ಟುಕೊಂಡು ಎರಡು ದಿನಕ್ಕೊಮ್ಮೆ ಕೂದಲಿಗೆ ಹಚ್ಚಿ ಮಸಾಜ್ ಮಾಡಬೇಕು. ಅರ್ಧ ಗಂಟೆಯ ನಂತರ ಸ್ನಾನ ಮಾಡಬೇಕು. ಅದರಲ್ಲಿರುವ ವಿಟಮಿನ್ ಸಿ ಕೂದಲ ಕಪ್ಪು ಬಣ್ಣದ ವೃದ್ಧಿಗೆ ಅಗತ್ಯವಾದ ಮೆಲನಿನ್ ಪ್ರಮಾಣ ಹೆಚ್ಚಾಗಲು ಸಹಕಾರಿ.
* 2 ಟೇಬಲ್ ಸ್ಪೂನ್ ಕಪ್ಪು ಟೀ ಸೊಪ್ಪಿನ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ ಆರಿದ ನಂತರ ಅದನ್ನು ತಲೆಯ ಬುಡಕ್ಕೆ ಲೇಪಿಸಿಕೊಂಡು 20 ನಿಮಿಷಗಳ ಬಳಿಕ ಕೂದಲನ್ನು ತೊಳೆದುಕೊಳ್ಳಬೇಕು. ಹೀಗೆ ವಾರಕ್ಕೆ ಎರಡರಿಂದ ಮೂರು ಬಾರಿ ಮಾಡಿದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
* ಕರಿಬೇವಿನ ಸೊಪ್ಪನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಆರಿದ ನಂತರ ಕೂದಲ ಬುಡಕ್ಕೆ ಹಚ್ಚಿದರೆ ಉತ್ತಮ ಫಲಿತಾಂಶ ಪಡೆಯಬಹುದು.
* 2 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯಲ್ಲಿ 2 ಟೀ ಸ್ಪೂನ್ ನಿಂಬೆ ರಸ ಬೆರೆಸಿ ಬಿಸಿ ಮಾಡಿ ಉಗುರು ಬೆಚ್ಚಗಿರುವಾಗ ಕೂದಲ ಬುಡಕ್ಕೆ ಹಚ್ಚಬೇಕು. ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು. ನಿಂಬೆಯಲ್ಲಿರುವ ವಿಟಮಿನ್ ಸಿ, ಬಿ, ಪಾಸ್ಪರಸ್ ಖನಿಜಗಳು ಮೆಲನಿನ್ ವೃದ್ಧಿಗೆ ಸಹಕಾರಿ.