ಹಿಂದು ಧರ್ಮದ ಪ್ರಕಾರ ಪ್ರತಿಯೊಂದು ದಿನಕ್ಕೂ ಅದರದೇ ಆದ ಮಹತ್ವವಿದೆ. ಒಂದೊಂದು ದಿನವೂ ಒಂದೊಂದು ದೇವತೆಗಳ ದಿನವಾಗಿರುತ್ತದೆ. ಹಾಗಾಗಿ ಆ ದಿನದ ಮಹತ್ವಕ್ಕೆ ತಕ್ಕಂತೆ ನಡೆದುಕೊಂಡ್ರೆ ದೇವಾನುದೇವತೆಗಳ ಕೃಪೆ ನಮ್ಮ ಮೇಲೆ ಬೀಳುತ್ತದೆ.
ಮಂಗಳವಾರ ಮಂಗಳ ಗ್ರಹದ ದಿನವೆಂದು ಭಾವಿಸಲಾಗುತ್ತದೆ. ಜಾತಕ ಫಲಕ್ಕೆ ಅಡ್ಡಿಯಾಗುವಂತಹ ಯಾವುದೇ ಕೆಲಸವನ್ನು ಮಂಗಳವಾರ ಮಾಡಬಾರದು. ಮಂಗಳವಾರ ಯಾವುದೇ ವಿಶೇಷ ಕೆಲಸಗಳನ್ನು ಮಾಡುವುದಿಲ್ಲ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಂಗಳದೋಷಕ್ಕೆ ಒಳಗಾಗಬಾರದು ಹಾಗೆ ಆರ್ಥಿಕ ಸಂಕಷ್ಟ ಎದುರಾಗಬಾರದೆಂದು ಬಯಸುವವರು ಕೆಲವೊಂದು ಕೆಲಸವನ್ನು ಇಂದು ಮಾಡದೆ ಇರುವುದು ಒಳ್ಳೆಯದು.
ಮಂಗಳವಾರ ಯಾರಿಗೂ ಹಣ ಕೊಡಬೇಡಿ. ಹಾಗೆ ಯಾರಿಂದಲೂ ಹಣ ಪಡೆಯಬೇಡಿ. ಇಂದು ಹಣ ಪಡೆದ್ರೆ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ.
ಮಂಗಳವಾರ ಹನುಮಂತನ ದಿನ. ಹಾಗಾಗಿ ಮದ್ಯ, ಮಾಂಸಾಹಾರಗಳಿಂದ ದೂರ ಇರಬೇಕು. ಇದರಿಂದ ದೇವರ ಕೃಪೆ ನಿಮ್ಮ ಮೇಲೆ ಬೀಳುತ್ತದೆ. ಹಾಗೆ ಯಾವುದೇ ಕೆಲಸಕ್ಕೆ ಅಡ್ಡಿಯುಂಟಾಗುವುದಿಲ್ಲ.
ಮಂಗಳವಾರ ಕೂದಲು ಕಟ್ ಮಾಡಬಾರದು. ಹಾಗೆ ಶೇವಿಂಗ್ ಮಾಡಬಾರದು. ಹೀಗೆ ಮಾಡಿದ್ರೆ ಮಂಗಳನ ದೋಷಕ್ಕೆ ತುತ್ತಾಗಬೇಕಾಗುತ್ತದೆ.
ಉಗುರುಗಳನ್ನು ಕತ್ತರಿಸಬಾರದು. ಮಂಗಳವಾರ ಉಗುರು ಕತ್ತರಿಸುವುದು ಅಶುಭ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.