ಮಹಿಳೆಯರಿಗೆ ಖಾಸಗಿ ಅಂಗದಲ್ಲಿ ತುರಿಕೆ, ಉರಿ ಕಾಣಿಸಿಕೊಳ್ಳುತ್ತಿರುತ್ತದೆ. ಚಳಿಗಾಲದಲ್ಲಿ ಇದ್ರ ಪ್ರಮಾಣ ಹೆಚ್ಚು. ಇದು ಮುಜುಗರವನ್ನುಂಟು ಮಾಡುತ್ತದೆ.
ಮಹಿಳೆಯರು ಮನೆಯಿಂದ ಹೊರಗೆ ಹೋಗಲು ಮನಸ್ಸು ಮಾಡುವುದಿಲ್ಲ. ಇದ್ರ ಜೊತೆ ಲ್ಯುಕೋರಿಯಾ ಅಂದ್ರೆ ಗುಪ್ತಾಂಗದಿಂದ ಹೊರಗೆ ಬರುವ ಬಿಳಿ ಸೆರಗು ಕೂಡ ಚಳಿಗಾಲದಲ್ಲಿ ಹೆಚ್ಚಾಗುತ್ತದೆ.
ವೈದ್ಯರ ಬಳಿ ಹೋಗಿ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಮಹಿಳೆಯರ ಸಂಖ್ಯೆ ಕಡಿಮೆ. ಹಾಗೆ ಇದಕ್ಕೆ ಸೂಕ್ತ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಮನೆಯಲ್ಲಿಯೇ ಕೆಲ ಔಷಧಿಗಳನ್ನು ಮಾಡಿ ಉರಿ, ತುರಿಕೆ, ಲ್ಯುಕೋರಿಯಾವನ್ನು ಕಡಿಮೆ ಮಾಡಿಕೊಳ್ಳಬಹುದು.
ಬಿಳಿ ಸೆರಗು ಹಾಗೂ ಅದ್ರಿಂದ ತುರಿಕೆ, ಉರಿ ಅನುಭವಿಸುವ ಮಹಿಳೆಯರು ನೆಲ್ಲಿಕಾಯಿಯನ್ನು ಒಣಗಿಸಿ ಪುಡಿ ಮಾಡಿ ಚೂರ್ಣ ಮಾಡಿಟ್ಟುಕೊಳ್ಳಿ, ಅದನ್ನು ಒಂದು ತಿಂಗಳ ಕಾಲ ಬೆಳಿಗ್ಗೆ ರಾತ್ರಿ ಒಂದೊಂದು ಚಮಚ ಸೇವಿಸುತ್ತ ಬನ್ನಿ. ಇದ್ರಿಂದ ಬಿಳಿ ಸೆರಗಿನ ಸಮಸ್ಯೆ ಕಡಿಮೆಯಾಗುತ್ತದೆ.
ಕಾಲು ಚಮಚ ಆಲಮ್ (ಪಟಿಕ) ನೀರಿಗೆ ಬೆರೆಸಿ ಪ್ರತಿ ದಿನ ಮೂರು ಬಾರಿ ಕುಡಿಯಿರಿ. ಇದಲ್ಲದೆ ಆಲಮ್ ನೀರಿನಿಂದ ಖಾಸಗಿ ಅಂಗವನ್ನು ಸ್ವಚ್ಛಗೊಳಿಸಿ. ಖಾಸಗಿ ಅಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.
ಬೇವಿನ ತೊಗಟೆ ಮತ್ತು ಅದರ ಎಲೆಗಳನ್ನು ಸಮಾನ ಪ್ರಮಾಣದಲ್ಲಿ ಪುಡಿಮಾಡಿ, ಅದರಲ್ಲಿ ನಾಲ್ಕನೇ ಒಂದು ಭಾಗವನ್ನು ಕಷಾಯ ಮಾಡಿ ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಿ. ಇದು ರೋಗವನ್ನು ನಿಯಂತ್ರಿಸುತ್ತದೆ.
ಎರಡು ಮಾಗಿದ ಬಾಳೆ ಹಣ್ಣುಗಳನ್ನು ಸಕ್ಕರೆ ಜೊತೆ ಬೆರೆಸಿ ಕೆಲ ದಿನಗಳ ಕಾಲ ಸೇವನೆ ಮಾಡುತ್ತ ಬಂದಲ್ಲಿ ಲ್ಯುಕೋರಿಯಾ ಸಮಸ್ಯೆ ಕಡಿಮೆಯಾಗುತ್ತದೆ.