ಆಕರ್ಷಕ ದೇಹ ಪಡೆಯಲು ಇವುಗಳು ನಿಮ್ಮ ಆಹಾರದಲ್ಲಿರಲಿ

ಪ್ರತಿಯೊಬ್ಬ ಮಹಿಳೆ ತನ್ನ ಮದುವೆಯ ದಿನದಂದು ಸುಂದರವಾಗಿ ಕಾಣಲು ಬಯಸ್ತಾಳೆ. ಲೆಹೆಂಗಾ ಇರಲಿ ಇಲ್ಲ ಸೀರೆಯಾಗಿರಲಿ. ದೇಹದ ಆಕಾರವು ಉತ್ತಮವಾಗಿದ್ದರೆ ನೀವು ತುಂಬಾ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುವಿರಿ. ಆದರೆ ಇದೆಲ್ಲವೂ ಒಂದೇ ದಿನದಲ್ಲಿ ಸಾಧ್ಯವಿಲ್ಲ. ಮದುವೆ ಹತ್ತಿರವಿದೆ ಎನ್ನುವವರು ಕೆಲವೊಂದು ಡಯೆಟ್ ಪ್ಲಾನ್ ಅನುಸರಿಸಿ ಸುಂದರ, ಆಕರ್ಷಕ ದೇಹದಲ್ಲಿ ಮಿಂಚಬಹುದು.

ತೂಕ ನಿಯಂತ್ರಣ ಮತ್ತು ಮುಖದ ಸೌಂದರ್ಯಕ್ಕಾಗಿ ತಾಜಾ  ಆಹಾರವನ್ನು ಸೇವಿಸಿ. ಸಂಸ್ಕರಿಸಿದ ಆಹಾರಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅವು ದೇಹದಲ್ಲಿ ಕ್ಯಾಲೊರಿಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ.

 ಸಿಹಿ ಆಹಾರದಿಂದ ಸಂಪೂರ್ಣ ದೂರವಿರಿ. ಸಕ್ಕರೆ ಬದಲಾಗಿ ಜೇನುತುಪ್ಪ, ಸಾವಯವ ಬೆಲ್ಲ, ತೆಂಗಿನಕಾಯಿ ಬಳಸಿ.

ಆಹಾರದಲ್ಲಿ ಗರಿಷ್ಠ ವಿಟಮಿನ್ ಸಿ ಸೇರಿಸಿ. ವಿಟಮಿನ್ ಸಿ ಇರುವ ತರಕಾರಿ ಮತ್ತು ಹಣ್ಣುಗಳನ್ನು ತೆಗೆದುಕೊಳ್ಳಿ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಚರ್ಮವನ್ನು ಬಿಗಿಯಾಗಿಡಲು ಸಹಾಯ ಮಾಡುತ್ತದೆ.

ನಿಮ್ಮನ್ನು ಸಾಧ್ಯವಾದಷ್ಟು ಸಕ್ರಿಯವಾಗಿರಿಸಿಕೊಳ್ಳಿ. ಜೊತೆಗೆ ನಿದ್ರೆಯನ್ನು ಬಿಡಬೇಡಿ. ಹೆಚ್ಚು ನಿದ್ರೆ ಮಾಡುವುದರಿಂದ ನಿಮ್ಮ ಚರ್ಮ ಮತ್ತು ಕೂದಲು ಎರಡೂ ಸುಧಾರಿಸುತ್ತದೆ. ಕಡಿಮೆ ನಿದ್ರೆಯಿಂದಾಗಿ ನಿಮ್ಮ ತೂಕವೂ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read