ಅಪೂರ್ವ ಗುಣವಿರುವ ತುಳಸಿಗೆ ವೈಜ್ಞಾನಿಕ ಸಂಶೋಧನೆಗಳ ಸಹಾಯದಿಂದ ಒತ್ತಡ ನಿವಾರಕ ಅಂದರೆ ಆಂಟಿ ಸ್ಟ್ರೆಸ್ ಗುಣವಿದೆ ಎಂದು ಕಂಡು ಹಿಡಿಯಲಾಗಿದೆ.
ಇದರ ಎಲೆಗಳಲ್ಲಿ ಸುಗಂಧ ದ್ರವ್ಯವಿದ್ದು, ಇದು ಸೂಕ್ಷ್ಮಾಣು ಜೀವ ನಾಶಕ ವಾಗಿದೆ. ಸಂಶೋಧನೆಗಳ ಪ್ರಕಾರ ಇದಕ್ಕೆ ಆಂಟಿವೈರಸ್ ಗುಣವಿರುವುದರಿಂದ ಎಲೆಯ ರಸವನ್ನು ವಿಷಮ ಜ್ವರದಲ್ಲಿ ಅಂದರೆ ವೈರಲ್ ಫಿವರ್ ಇದ್ದಾಗ ಯಶಸ್ವಿಯಾಗಿ ಬಳಸಬಹುದಾಗಿದೆ.
ಅಷ್ಟೇ ಅಲ್ಲದೆ, ಇದರ ಎಲೆಯನ್ನು ಚೆನ್ನಾಗಿ ತೊಳೆದು ಶುಭ್ರ ಕಲ್ಲಿನಲ್ಲಿ ಅರೆದು ಬಟ್ಟೆಯ ಸಹಾಯದಿಂದ ಹಿಂಡಿ ಬರುವ ರಸವನ್ನು ಚಿಕ್ಕ ಮಕ್ಕಳಿಗೆ ಒಂದರಿಂದ ಎರಡು ಚಮಚದಷ್ಟು ಮತ್ತು ದೊಡ್ಡವರಿಗೆ 2-4 ಚಮಚದಷ್ಟು ಜೇನಿನೊಂದಿಗೆ ನೀಡಬಹುದು. ದಿನಕ್ಕೆ ಎರಡರಿಂದ ಮೂರು ಬಾರಿ ನೀಡಬಹುದು.
ತಂದೆ ಪ್ರಾಣ ಉಳಿಸಲು ಮಗ ಮಾಡಿದ್ದಾನೆ ಇಂಥ ಕೆಲಸ…..
ತುಳಸಿ ಎಲೆಯ ರಸವನ್ನಾಗಲಿ ಅಥವಾ ಒಣಗಿದ ಎಲೆಯ ಟೀಯನ್ನಾಗಲಿ ಶ್ವಾಸಕೋಶಗಳ ಸೋಂಕು, ಕೆಮ್ಮು, ನೆಗಡಿ, ಹೆಚ್ಚು ಕಫ ಬರುವುದು ಇದ್ದರೆ ಉಪಯೋಗಿಸಬಹುದು.
ಸಾರ್ವಜನಿಕ ಶೌಚಾಲಯಕ್ಕೆ ಹೋಗೋ ಮುನ್ನ ಹುಷಾರ್: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..!
ಬಟ್ಟೆಯಲ್ಲಿ ಶೋಧಿಸಿದ ಒಂದು ಬಿಂದಿಗೆ ಕುಡಿಯುವ ನೀರಿಗೆ ಐದು ಆರು ತುಳಸಿ ಎಲೆಗಳನ್ನು ಹಾಕಿ ಮುಚ್ಚಿಟ್ಟು ಮೂರು ನಾಲ್ಕು ಗಂಟೆಗಳ ನಂತರ ಪ್ರತಿ ದಿನ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದರಿಂದ ಹೇನು, ತಲೆ ಹೊಟ್ಟು, ಚರ್ಮದ ಸೋಂಕುಗಳನ್ನು ನಿವಾರಿಸಿ ಕೊಳ್ಳಬಹುದು.