alex Certify ಜೇನು ಸೇವಿಸುವುದರಿಂದ ಸಿಗಲಿದೆ ಈ ಆರೋಗ್ಯ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೇನು ಸೇವಿಸುವುದರಿಂದ ಸಿಗಲಿದೆ ಈ ಆರೋಗ್ಯ ಪ್ರಯೋಜನ

ನಾವು ತಿನ್ನುವ ಹಲವಾರು ವಿಧದ ಸಿಹಿ ಪದಾರ್ಥಗಳಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಪದಾರ್ಥವೆಂದರೆ ಅದು ಜೇನುತುಪ್ಪ. ನಮ್ಮ ದಿನನಿತ್ಯದ ಅನೇಕ ಬಳಕೆಗಳಲ್ಲಿ ಜೇನನ್ನು ಬಳಸುತ್ತೇವೆ. ಅನೇಕ ವಿಧವಾದ ಆರೋಗ್ಯಕರ ಗುಣಗಳನ್ನು ಜೇನು ಹೊಂದಿದೆ. ಅದರ ವಿವರ ಇಲ್ಲಿದೆ.

* ಜೇನುತುಪ್ಪದ ಸೇವನೆಯು ವಾಂತಿ, ವಾಕರಿಕೆಯನ್ನು ನಿಯಂತ್ರಿಸುತ್ತದೆ.

* ಬೆಳಗ್ಗೆ ಎದ್ದಕೂಡಲೇ ಹಾಗೂ ಮಲಗುವ ಮುನ್ನ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಬೆರೆಸಿ ಕುಡಿಯುವುದನ್ನು ರೂಢಿಸಿಕೊಂಡರೆ ದೇಹದ ತೂಕ ನಿಯಮಿತವಾಗಿ ಕಡಿಮೆಯಾಗುತ್ತದೆ.

* ಜೇನುತುಪ್ಪದೊಡನೆ ಶುಂಠಿ, ಹಿಪ್ಪಲಿ, ತೇಜಪತ್ರೆಯನ್ನು ಅರೆದು ದಂತಗಳನ್ನು ತಿಕ್ಕುವುದರಿಂದ ಒಸಡುಗಳಲ್ಲಿ ರಕ್ತಸ್ರಾವ ಹಾಗೂ ನೋವು ಕಡಿಮೆಯಾಗುತ್ತದೆ.

* ಜೇನುತುಪ್ಪ ಸೇವನೆಯು ಹಾರ್ಮೋನ್‌ಗಳ ಅಸಮತೋಲನವನ್ನು ತಪ್ಪಿಸಲು ಸಹಕಾರಿಯಾಗುತ್ತದೆ.

* ಜೇನುತುಪ್ಪವನ್ನು ನೆಕ್ಕುವುದರಿಂದ ಶೀತ, ಗಂಟಲು ಕೆರೆತ ನಿವಾರಿಸಬಹುದು.

* ಗರ್ಭಿಣಿಯರು ಜೇನುತುಪ್ಪವನ್ನು ಸೇವಿಸುವುದರಿಂದ ಎದೆ ಹಾಲು ಉತ್ಪತ್ತಿಯಾಗುತ್ತದೆ.

* ರಕ್ತದೊತ್ತಡ ಹಾಗೂ ಇನ್ನಿತರ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ದಿನಾ ಬೆಳಗ್ಗೆ ಒಂದು ಲೋಟ ನೀರಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಸೇವಿಸುವುದು ಒಳ್ಳೆಯದು.

* ಬಾಳೆಹಣ್ಣು, ನೆಲ್ಲಿಕಾಯಿ ರಸ ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಬಿಳಿಸೆರಗು ನಿಯಂತ್ರಣಕ್ಕೆ ಬರುತ್ತದೆ.

* ಚೇಳು ಕಡಿದ ಭಾಗಕ್ಕೆ ಜೇನುತುಪ್ಪವನ್ನು ಸವರುವುದರಿಂದ ಉರಿಯು ಕಡಿಮೆಯಾಗುತ್ತದೆ.

* ಜೇನುತುಪ್ಪವು ಹಸಿವನ್ನು ನಿಯಂತ್ರಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪವನ್ನು ಸೇವಿಸುವುದರಿಂದ ದೇಹದಲ್ಲಿನ ಅನಗತ್ಯ ಕೊಬ್ಬನ್ನು ನಿವಾರಿಸಿಕೊಳ್ಳಲು ಸಹಾಯಕವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...