ಕೆಲವರು ದಿನಪೂರ್ತಿ ದುಡಿದ್ರೂ ಕೈಗೆ ಹಣ ಬರುವುದಿಲ್ಲ. ಆರ್ಥಿಕ ಅಭಿವೃದ್ಧಿಯಾಗುವುದಿಲ್ಲ. ಕೆಲಸದ ಜೊತೆ ಅದೃಷ್ಟ ಕೈ ಹಿಡಿದ್ರೆ ಮಾತ್ರ ಧನ ಸಮಸ್ಯೆ ಬಗೆಹರಿಯಲು ಸಾಧ್ಯ. ಪ್ರತಿ ನಿತ್ಯ ಕೆಲವೊಂದು ಸಣ್ಣಪುಟ್ಟ ಉಪಾಯಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲವು. ಆರ್ಥಿಕ ಅಭಿವೃದ್ಧಿ ಜೊತೆ ಸುಖ-ಶಾಂತಿ ಮನೆ ಮಾಡುತ್ತದೆ.
ಮಂಗಳವಾರ ಗೋಧಿ ಹಿಟ್ಟಿಗೆ ಬೆಲ್ಲ ಸೇರಿಸಿ ಉಂಡೆ ಮಾಡಬೇಕು. ಇದನ್ನು ಹನುಮಂತನ ದೇವಸ್ಥಾನಕ್ಕೆ ಅರ್ಪಿಸಬೇಕು. ಇದ್ರಿಂದ ಸಾಲ ಸಮಸ್ಯೆ ಕಡಿಮೆಯಾಗುತ್ತದೆ.
ಪ್ರತಿ ದಿನ ಬೆಳಿಗ್ಗೆ ಸೂರ್ಯನಿಗೆ ಜಲ ಅರ್ಪಣೆ ಮಾಡುವುದ್ರಿಂದ ಆರ್ಥಿಕ ತೊಂದರೆ ನಿವಾರಣೆಯಾಗುತ್ತದೆ.
ಬೇಯಿಸಿದ ಜೇಡಿಮಣ್ಣಿನ ಹೂಜಿಗೆ ಕೆಂಪು ಬಣ್ಣ ಹಚ್ಚಿ. ಅದರಲ್ಲಿ ತೆಂಗಿನಕಾಯಿಯೊಂದಿಗೆ ನೀರಿನಲ್ಲಿ ಹರಿಯುವಂತೆ ಮಾಡಿ. ಹೀಗೆ ಮಾಡಿದ್ರೆ ಸಂಪತ್ತು ಪ್ರಾಪ್ತಿಯಾಗುತ್ತದೆ.
ಹಣಕಾಸಿನ ಸಮಸ್ಯೆಯಿರುವವರು 21 ಶುಕ್ರವಾರಗಳ ಕಾಲ 5 ಹುಡುಗಿಯರಿಗೆ ಆಹಾರವನ್ನು ನೀಡಿ.
ಮನೆಯ ಯಾವುದೆ ನೀರಿನ ನಲ್ಲಿ ಸೋರದಂತೆ ನೋಡಿಕೊಳ್ಳಿ. ಹಾಗೆ ಒಲೆ ಮೇಲಿಟ್ಟ ಟೀ, ಹಾಲು ಉಕ್ಕದಂತೆ ನೋಡಿಕೊಳ್ಳಿ.
ಬೀಗವನ್ನು ಖರೀದಿಸಿ ಮತ್ತು ಬೀಗಗಳನ್ನು ಯಾವುದೇ ಧಾರ್ಮಿಕ ಸ್ಥಳದಲ್ಲಿ ಶನಿವಾರ ಬೆಳಿಗ್ಗೆ ಇರಿಸಿ. ಯಾರಾದರೂ ಆ ಲಾಕ್ ತೆರೆದ ತಕ್ಷಣ, ನಿಮ್ಮ ಅದೃಷ್ಟದ ಬೀಗವೂ ತೆರೆಯುತ್ತದೆ. ಕೆಲಸ ಸಮಸ್ಯೆಯಿರುವವರಿಗೆ ಇದು ಪರಿಹಾರ ನೀಡುತ್ತದೆ.