alex Certify ಡಯಟ್ ಫುಡ್‌ ಸೇವಿಸುವ ಮುನ್ನ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಯಟ್ ಫುಡ್‌ ಸೇವಿಸುವ ಮುನ್ನ ತಿಳಿದಿರಲಿ ಈ ವಿಷಯ

ಒಬೆಸಿಟಿ ಆಧುನಿಕ ಲೈಫ್‌ಸ್ಟೈಲ್‌ನ ಕೊಡುಗೆಯಾಗಿದ್ದು, ಬೊಜ್ಜನ್ನು ಕರಗಿಸುವುದು ಹೇಗೆ ಎನ್ನುವುದೇ ಹೆಚ್ಚಿನವರ ಸಮಸ್ಯೆಯಾಗಿದೆ.

ಈ ಸಮಸ್ಯೆಯನ್ನೇ ಲಾಭ ಮಾಡಿಕೊಂಡಿರುವ ಕೆಲ ಕಂಪನಿಗಳು ಈ ಪುಡಿ ಕುಡಿಯಿರಿ ಒಂದು ತಿಂಗಳಿನಲ್ಲಿ ತೆಳ್ಳಗಾಗುವಿರಿ, ಈ ಡಯಟ್ ಫುಡ್‌ ತಿಂದರೆ ಬೊಜ್ಜು ಕರಗುತ್ತದೆ ಎಂದು ಜನರನ್ನು ಸೆಳೆಯುತ್ತಾ ಅವರ ಆಹಾರವನ್ನು ಮತ್ತಷ್ಟು ಹಾಳು ಮಾಡುತ್ತಿವೆ.

ಇಂಥ ಡಯಟ್ ಫುಡ್‌ಗಳ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಆರೋಗ್ಯಕ್ಕೆ ಒಳ್ಳೆಯದೆಂದು ಸೇವಿಸುತ್ತಿರುವ ಈ ಆಹಾರಗಳನ್ನು ಸ್ಟಾಪ್‌ ಮಾಡುವುದೇ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

* ಓಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಫ್ಲೇವರ್ಡ್‌ ಓಟ್ಸ್‌ನಲ್ಲಿ ಸಕ್ಕರೆಯಂಶ ಇರುತ್ತದೆ. ಕೃತಕ ಸಿಹಿ ಇರುವ ಈ ಓಟ್ಸ್‌ ಬಾಯಿಗೆ ರುಚಿ ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ.

* ಜ್ಯೂಸ್‌ ಕುಡಿಯುವುದಾದರೆ ಫ್ರೆಶ್‌ ಜ್ಯೂಸ್ ಕುಡಿಯಿರಿ. ಪ್ಯಾಕ್‌ ಮಾಡಿರುವ ಜ್ಯೂಸ್‌ನಲ್ಲಿ ಮಿತಿಗಿಂತ ಅಧಿಕ ಸಕ್ಕರೆಯಂಶವಿರುತ್ತದೆ.

* ಶಕ್ತಿಗಾಗಿ ಎನರ್ಜಿ ಡ್ರಿಂಕ್‌ ಮೊರೆ ಹೋಗದೆ ಶಕ್ತಿವರ್ಧಕ ಆಹಾರಗಳನ್ನು ತಿನ್ನಿ. ಎನರ್ಜಿ ಡ್ರಿಂಕ್‌ ನಲ್ಲಿ ಸಕ್ಕರೆಯಂಶ ಹೆಚ್ಚು.

* ಡೈಜೆಸ್ಟಿವ್‌ ಬಿಸ್ಕೆಟ್ ಕೊಳ್ಳುವಾಗ ಅವುಗಳಲ್ಲಿರುವ ಸಕ್ಕರೆಯಂಶದ ಬಗ್ಗೆ ಗಮನ ಹರಿಸಬೇಕು. ಶುಗರ್ ಫ್ರೀ ಎಂದು ನೀಡುವ ಎಲ್ಲಾ ಬಿಸ್ಕೆಟ್‌ ಸಂಪೂರ್ಣವಾಗಿ ಶುಗರ್‌ ಫ್ರೀ ಆಗಿರುವುದಿಲ್ಲ.

* ಪ್ರೊಟೀನ್‌ ಬಾರ್‌ಗಳನ್ನು ತಿನ್ನುವುದಕ್ಕಿಂತ ಪ್ರೊಟೀನ್‌ಗಾಗಿ ನಟ್ಸ್‌ಗಳನ್ನು ಹಾಗೇ ತಿನ್ನುವುದೇ ಉತ್ತಮ. ಈ ರೀತಿಯ ಬಾರ್‌ಗಳಲ್ಲಿ ಕೃತಕ ಸಿಹಿ ಅಂಶ ಅಧಿಕವಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...