ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಸಾಮಾನ್ಯ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಅನೇಕರು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ ನಿಂದಾಗಿ ಅನೇಕ ಸಮಸ್ಯೆಗಳು ಕಾಡುತ್ತವೆ. ಇದ್ರಿಂದ ಮುಕ್ತಿ ಪಡೆಯಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಸಾಕಷ್ಟು ಮಾತ್ರೆಗಳನ್ನು ಸೇವಿಸ್ತಾರೆ. ಗ್ಯಾಸ್ ಸಮಸ್ಯೆಗೆ ಮನೆಯಲ್ಲೇ ಮದ್ದಿದೆ.
ಗ್ಯಾಸ್ ಗೆ ಅನೇಕ ಕಾರಣಗಳಿವೆ. ಒತ್ತಡ, ಚಡಪಡಿಕೆ, ಭಯ, ಆತಂಕ, ಕೋಪದ ಕಾರಣ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅಜೀರ್ಣ ಗ್ಯಾಸ್ ಗೆ ಕಾರಣವಾಗುತ್ತದೆ.
ಗ್ಯಾಸ್ ಸಮಸ್ಯೆಯಿರುವವರು ಒಂದು ಚಮಚ ಓಂ ಕಾಳಿಗೆ ಚಿಟಕಿ ಉಪ್ಪನ್ನು ಹಾಕಿ ಅಗೆದು ರಸವನ್ನು ನಿಧಾನವಾಗಿ ನುಂಗಿ. ಕೆಲವೇ ಕ್ಷಣಗಳಲ್ಲಿ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿ ಕೂಡ ಗ್ಯಾಸ್ ಕಡಿಮೆ ಮಾಡುತ್ತದೆ. ಜೀರಿಗೆ, ಕೊತ್ತಂಬರಿ ಬೀಜದ ಜೊತೆ ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ. ದಿನದಲ್ಲಿ 2 ಬಾರಿ ಈ ನೀರನ್ನು ಕುಡಿಯಬೇಕು.
ಒಂದು ಚಮಚ ಶುಂಠಿ ರಸ ಹಾಗೂ ಒಂದು ಚಮಚ ನಿಂಬೆ ರಸವನ್ನು ಚಿಟಕಿ ಉಪ್ಪಿನೊಂದಿಗೆ ಬೆರೆಸಿ ಊಟದ ನಂತ್ರ ಸೇವನೆ ಮಾಡುವುದ್ರಿಂದ ಹೊಟ್ಟೆಯಲ್ಲಿ ಕಾಡುವ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
ಊಟ ಮಾಡುವ ವೇಳೆ ಬೆಳ್ಳುಳ್ಳಿ, ಹಿಂಗನ್ನು ಸ್ವಲ್ಪ ಸ್ವಲ್ಪ ಸೇವನೆ ಮಾಡಿದ್ರೂ ಗ್ಯಾಸ್ ಕಡಿಮೆಯಾಗುತ್ತದೆ.