ಮನೆಯಂಗಳದ ತುಳಸಿಯಿಂದ ಇದೆ ಹತ್ತು ಹಲವು ʼಆರೋಗ್ಯʼ ಪ್ರಯೋಜನ

 

Ocimum tenuiflorum (holy basil) | CABI Compendiumಯಾವ ಮನೆಯಲ್ಲಿ ತುಳಸಿ ಮತ್ತು ಆಕಳು ಇರುವುದೋ ರೋಗ ಆ ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ಒಂದು ಮಾತಿದೆ. ಇದರ ವಿಶೇಷತೆಗನುಗುಣವಾಗಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.

ಎಲ್ಲ ಸ್ಥಳಗಳಲ್ಲಿ ಸುಲಭವಾಗಿ ದೊರೆಯುವ ಇದಕ್ಕೆ ‘ಸುಲಭಾ’ ಎಂಬ ಹೆಸರಿದೆ. ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ತುಳಸಿಗೆ ‘ಗ್ರಾಯಾ’ ಎಂದೂ ಕರೆಯುತ್ತಾರೆ. ಶೂಲೆ(ಪೀಡೆ)ಗಳ ನಾಶ ಮಾಡುವುದರಿಂದ ಇದನ್ನು ‘ಶೂಲ್ಗನಿ’ ಎಂದು ಕರೆಯುತ್ತಾರೆ.

 ನಮ್ಮ ಶರೀರ, ಮನಸ್ಸುಗಳನ್ನು ಸಧೃಡಗೊಳಿಸುವ ತುಳಸಿಗೆ ವಿಶೇಷ ಸ್ಥಾನಮಾನವಿದೆ. ತುಳಸಿಯ 5-6 ಎಲೆಗಳನ್ನು ತಿನ್ನುವುದರಿಂದ ಮತ್ತು ತುಳಸಿ ಎಲೆ ಹಾಕಿಟ್ಟ ನೀರನ್ನು ಕುಡಿಯುವುದರಿಂದ ಪಿತ್ತ ದೋಷ ಮತ್ತು ಕಫ ದೋಷ ಮಾಯವಾಗುತ್ತದೆ.
ಇದು ಜ್ಞಾಪಕ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ಮಾಡುತ್ತದೆ. ತುಳಸಿಯಲ್ಲಿ ಕ್ಯಾನ್ಸರ್ ದೂರ ಮಾಡುವ ಗುಣವೂ ಇದೆ. ತುಳಸಿ ಮಾಲೆಯನ್ನು ಧರಿಸುವುದರಿಂದ ರಕ್ತಸಂಚಾರ ಸರಾಗವಾಗುತ್ತದೆ ಮತ್ತು ಅಸ್ತಮಾ, ಟಿಬಿ, ಅಲ್ಸರ್, ಕಫಜನ್ಯ ರೋಗಗಳು ದೂರವಾಗುತ್ತವೆ.
 ಕೆಲವು ಔಷಧಿಗಳು ನಮ್ಮ ಶರೀರಕ್ಕೆ ವಿಷಕಾರಿಯಾಗಿರುತ್ತವೆ. ಇಂತಹ ಔಷಧಿಗಳಿಂದ ಯಕೃತ್ತನ್ನು ರಕ್ಷಿಸುವ ಕೆಲಸವನ್ನು ತುಳಸಿ ಮಾಡುತ್ತದೆ. ಗರ್ಭವತಿಯರು ತುಳಸಿ ನೀರಿನ ಸೇವನೆ ಮಾಡಿದರೆ ಹೆರಿಗೆ ನೋವು ಕಡಿಮೆಯಾಗುತ್ತದೆ ಮತ್ತು ಹೆರಿಗೆ ಸರಾಗವಾಗುತ್ತದೆ. ತುಳಸಿ ಪ್ರದಕ್ಷಿಣೆ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಈಶಾನ್ಯ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಅಭಿವೃದ್ಧಿಯಾಗುತ್ತದೆ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read