ಮಸಾಜ್ ಮಾಡುವುದರಿಂದ ಮಗುವಿಗೆ ಸ್ನಾನವಾದ ನಂತರ ಒಳ್ಳೆಯ ನಿದ್ರೆ ಬರುತ್ತದೆ. ಚಿಕ್ಕ ಮಕ್ಕಳಿಗೆ ನಿದ್ರೆ ತುಂಬಾ ಮುಖ್ಯ. ಯಾಕೆಂದರೆ ಅವರ ಬೆಳವಣಿಗೆ ನಡೆಯುವುದೇ ನಿದ್ರೆಯ ಸಮಯದಲ್ಲಿ. ಹಾಗಾಗಿ ಸುಖ ನಿದ್ರೆ ಅವರ ಆರೋಗ್ಯದ ಗುಟ್ಟು.
ಜೀರ್ಣಕ್ರಿಯೆ
ಒಂದು ನಿರ್ದಿಷ್ಟ ಕ್ರಮದಲ್ಲಿ ಮಸಾಜ್ ಮಾಡುವುದರಿಂದ ಚೆನ್ನಾಗಿ ರಕ್ತ ಸಂಚಾರವಾಗುವುದಲ್ಲದೆ, ಜೀರ್ಣಕ್ರಿಯೆಯೂ ಸುಗಮವಾಗುತ್ತದೆ. ಇನ್ನೂ ಎದ್ದು ಕೂರಲು ಬಾರದ ಮಗುವಿಗೆ ಜೀರ್ಣಕ್ರಿಯೆ ಸುಗಮವಾಗಬೇಕಾದರೆ ಮಸಾಜ್ ಮುಖ್ಯ.
ಸಂಬಂಧ ಗಟ್ಟಿಯಾಗುತ್ತದೆ
ನಿಮಗೇ ಗೊತ್ತಿರುವಂತೆ ಚಿಕ್ಕವರಿದ್ದಾಗ ನಮಗೆ ಎಣ್ಣೆ ಮಸಾಜ್ ಮಾಡಿದ ಕೈಗಳನ್ನು ನಾವು ದೊಡ್ಡವರಾದ ಮೇಲೂ ಮರೆಯಲ್ಲ. ಅದೊಂಥರಾ ಭಾವನಾತ್ಮಕ ನಂಟು ಬೆಳೆಯುತ್ತದೆ. ಅಮ್ಮನ ಬೆಚ್ಚಗಿನ ಕೈಯಿಂದ ಮಸಾಜ್ ಮಾಡುತ್ತಿದ್ದರೆ, ಮಗುವಿಗೆ ಸುರಕ್ಷಿತ ಭಾವನೆ ಉಂಟಾಗುತ್ತದೆ.