
ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಜೊತೆಗೆ ಕೆಮ್ಮು, ಶೀತ ಸಮಸ್ಯೆಯಿರುವವರು ವೀಳ್ಯದೆಲೆಯಿಂದ ತಯಾರಿಸಿದ ರಸಂ ಸೇವಿಸಿ.
ಇದನ್ನು ತಯಾರಿಸುವ ವಿಧಾನ ಹೇಗೆಂದು ನೋಡೋಣ.
ಬೇಕಾಗುವ ಸಾಮಾಗ್ರಿಗಳು
ವೀಳ್ಯದೆಲೆ 2
 ಬೆಳ್ಳುಳ್ಳಿ 5 ಎಸಳು
 ಕಾಳುಮೆಣಸು 10
 ಜೀರಿಗೆ 1/2 ಚಮಚ
 ಒಣಮೆಣಸಿನಕಾಯಿ 1
 ಟೊಮೆಟೊ 2
 ಹುಣಸೆ ರಸ
 ಕೊತ್ತಂಬರಿ ಸೊಪ್ಪು ಸ್ವಲ್ಪ
 ಕರಿ ಬೇವು ಸ್ವಲ್ಪ
 ಉಪ್ಪು ರುಚಿಗೆ ತಕ್ಕಷ್ಟು
 ಎಣ್ಣೆ
ಮಾಡುವ ವಿಧಾನ
ಮೊದಲು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ, ಕಾಳುಮೆಣಸು, ಜೀರಿಗೆ, ಒಣ ಮೆಣಸಿನಕಾಯಿ ಮತ್ತು ಸಣ್ಣಗೆ ಹೆಚ್ಚಿದ ವೀಳ್ಯದೆಲೆಯನ್ನು ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
ಹಾಗೇ ಟೊಮೆಟೊವನ್ನು ರುಬ್ಬಿಟ್ಟುಕೊಳ್ಳಿ. ಹಾಗು ಹುಣಸೆಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ.
ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ರುಬ್ಬಿದ ಪುಡಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಅದಕ್ಕೆ ರುಬ್ಬಿದ ಟೊಮೆಟೊ, ಸ್ವಲ್ಪ ಹುಣಸೆ ರಸ, ಅಗತ್ಯಕ್ಕೆ ತಕ್ಕಂತೆ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿ.
ಕೊನೆಯಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿ. ಈಗ ರುಚಿ ರುಚಿಯಾದ ವೀಳ್ಯದೆಲೆ ರಸಂ ಸವಿಯಲು ಸಿದ್ಧ.
ಇದನ್ನು ಬಿಸಿಬಿಸಿ ಅನ್ನಕ್ಕೆ ತುಪ್ಪದ ಜೊತೆ ಅಥವಾ ಸೂಪ್ ರೀತಿಯಲ್ಲಿ ಕುಡಿದರೆ ತುಂಬಾ ರುಚಿಯಾಗಿರುತ್ತದೆ. ಇದು ಶೀತ ಮತ್ತು ಕೆಮ್ಮಿಗೆ ಉತ್ತಮ ಔಷಧಿಯಾಗಿದೆ.

 
		 
		 
		 
		 Loading ...
 Loading ... 
		 
		 
		