ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ದಿನದಲ್ಲಿ 7-8 ಗಂಟೆ ನಿದ್ರೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನಿದ್ರೆ ಮಾಡಲು ಭಂಗಿ ಬಹಳ ಮುಖ್ಯವಾಗುತ್ತದೆ. ಕೆಲವೊಂದು ನಿದ್ರಾ ಭಂಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿದ್ರೆ ಮಾಡುವ ಮೊದಲು ನಿದ್ರಾ ಭಂಗಿ ಬಗ್ಗೆ ತಿಳಿದಿರಬೇಕು.
ತಲೆ ಕೆಳಗೆ ದಿಂಬು ಹಾಕಿ ಮಲಗುವುದು ಸಾಮಾನ್ಯ. ಆದ್ರೆ ಕೆಲವರು ಕಾಲಿನ ಮಧ್ಯೆ ದಿಂಬಿಟ್ಟು ಮಲಗ್ತಾರೆ. ಈ ಅಭ್ಯಾಸವಿರುವವರು ಕುಟುಂಬಸ್ಥರ ಕೋಪಕ್ಕೂ ಗುರಿಯಾಗಿರುತ್ತಾರೆ. ಆದ್ರೆ ಇದು ಒಳ್ಳೆ ಅಭ್ಯಾಸ. ಬಳಲಿದ ಕಾಲಿಗೆ ಇದು ವಿಶ್ರಾಂತಿ ನೀಡುತ್ತದೆ.
ಸಾಮಾನ್ಯವಾಗಿ ತಲೆ ಕೆಳಗೆ ಒಂದು ದಿಂಬು ಹಾಕಿ ಮಲಗ್ತೇವೆ. ಕೆಲವರು ಎರಡು ದಿಂಬು ಬಳಸ್ತಾರೆ. ಸೈನಸ್ ಸಮಸ್ಯೆಯಿರುವವರಿಗೆ ಇದು ಒಳ್ಳೆಯದು. ಸೈನಸ್ ಸಮಸ್ಯೆ ನಿಮಗಿದ್ದರೆ ನೀವೂ ತಲೆ ಕೆಳಗೆ ಎರಡು ದಿಂಬಿಟ್ಟು ಮಲಗಿ. ಇದ್ರಿಂದ ಸುಲಭವಾಗಿ ನಿದ್ರೆ ಬರುತ್ತದೆ. ಆಗಾಗ ಉಸಿರಾಟದ ಸಮಸ್ಯೆ ಕಾಡುವುದಿಲ್ಲ.
ಮುಟ್ಟಿನ ಅವಧಿಯಲ್ಲಿ ಅನೇಕ ಮಹಿಳೆಯರಿಗೆ ಹೊಟ್ಟೆ, ಕಾಲು ನೋವು ಕಾಣಿಸಿಕೊಳ್ಳುತ್ತದೆ. ಅಂತವರು ಮೊಳಕಾಲಿನ ಕೆಳಗೆ ದಿಂಬಿಟ್ಟು ಮಲಗಬಹುದು. ಇದು ಬೆನ್ನು ಮತ್ತು ಕಾಲು ನೋವನ್ನು ಕಡಿಮೆ ಮಾಡುತ್ತದೆ.