ಹೊರಗೆ ಹೋದಾಗ ಟೈಂಪಾಸಿಗೆ ಏನಾದರೂ ತಿಂಡಿ ತಿನ್ನುತ್ತೇವೆ. ಅವುಗಳಲ್ಲಿ ಮೆಕ್ಕೆಜೋಳದ ತೆನೆಯೂ ಒಂದು. ಆದರೆ ಮೆಕ್ಕೆಜೋಳದ ತೆನೆ ಬರೀ ಟೈಂಪಾಸ್ ಗಲ್ಲ. ಇದರಲ್ಲಿ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಟೈಂಪಾಸ್ ತಿಂಡಿಗಳಲ್ಲಿ ಆರೋಗ್ಯ ರಕ್ಷಣೆಯ ಸೂತ್ರವನ್ನು ಕಂಡುಕೊಳ್ಳಿ.
* ಮೆಕ್ಕೆಜೋಳದಲ್ಲಿ ಡಯಟರಿ ಫೈಬರ್ ಎಂದರೆ ನಾರು ಸತ್ವ ತುಂಬಾ ಹೆಚ್ಚು. ಅದು ಮಲವಿಸರ್ಜನೆ ಸುಲಭವಾಗುವಂತೆ ಮಾಡುತ್ತದೆ. ಮಲಬದ್ಧತೆ ದೂರಮಾಡುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ.
* ಒಂದು ಕಪ್ ಮೆಕ್ಕೆಜೋಳದಲ್ಲಿ 18.4 ಶೇಕಡ ನಾರು ಸತ್ವ ಇದೆಯಾದ್ದರಿಂದ ಪೈಲ್ಸ್ ತೊಂದರೆಯನ್ನು ನಿವಾರಿಸುತ್ತದೆ. ಕ್ಯಾನ್ಸರ್ ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಇರಿಟೇಬಲ್ ಬೋವಲ್ ಸಿಂಡ್ರೋಮ್ ಕಾಡದಂತೆ ನೋಡಿಕೊಳ್ಳುತ್ತದೆ.
* ಕಬ್ಬಿಣ ಸತ್ವ ಮಟ್ಟವನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಗ್ಗಿಸುತ್ತದೆ. ಹೊಸ ರಕ್ತ ಕಣ ಹುಟ್ಟುವುದಕ್ಕೂ ಮೆಕ್ಕೆಜೋಳ ದಾರಿ ಮಾಡುತ್ತದೆ.
* ಮೆಕ್ಕೆಜೋಳದಲ್ಲಿ ಖನಿಜ ಲವಣಗಳಾದ ಪಾಸ್ಪರಸ್, ಮೆಗ್ನೀಷಿಯಂ, ಮ್ಯಾಂಗನೀಸ್, ಐರನ್, ಕಾಪರ್ ಸಾಕಷ್ಟು ಪ್ರಮಾಣದಲ್ಲಿವೆ. ಅಲ್ಲದೆ ಅಪರೂಪದ ಸೆಲೆನಿಯಮ್ ಕೂಡ ಅಧಿಕವಿದೆ. ಇದು ಪಾಸ್ಪರಸ್ ನೊಂದಿಗೆ ವರ್ತಿಸಿ ಎಲುಬುಗಳನ್ನು ಗಟ್ಟಿಗೊಳಿಸುತ್ತದೆ. ಮೆಗ್ನೀಷಿಯಂ ಎಲುಬಿನ ಆರೋಗ್ಯದೊಂದಿಗೆ ಹೃದಯವನ್ನು ಬಲಪಡಿಸುತ್ತದೆ.
* ಇದರಲ್ಲಿ ಕೆರೋಟಿನಾಯ್ಡ್, ವಿಟಮಿನ್ ಎ, ಬೀಟಾ-ಕ್ಯಾರೋಟಿನ್ ಗಳಿವೆ. ಇದು ವಯಸ್ಸಾದ ಕಾಲದಲ್ಲಿ ಕಾಣಿಸಿಕೊಳ್ಳುವ ನಾನಾ ನೋವುಗಳನ್ನು ನಿವಾರಿಸುತ್ತದೆ.
* ಮೆಕ್ಕೆಜೋಳದ ಆಂಟಿ ಆಕ್ಸಿಡೆಂಟ್ ಗಳು ಫ್ರೀ ರಾಡಿಕಲ್ಸ್ ಗಳನ್ನು ಬಲಗುಂದಿಸಿ ಹಲವು ಬಗೆಯ ಕ್ಯಾನ್ಸರ್ ಗಳು ಬಾರದಂತೆ ಕಾಯುತ್ತದೆ.