ನಾವು ತೆಗೆದುಕೊಳ್ಳುವ ಆಹಾರದಲ್ಲಿ ಮುಂಜಾನೆ ತೆಗೆದುಕೊಳ್ಳುವ ಆಹಾರದ ಪಾತ್ರ ದೊಡ್ಡದು. ಆದ್ದರಿಂದ ಎಂದೂ ಅದನ್ನು ನಿರ್ಲಕ್ಷ್ಯ ಮಾಡಬಾರದು. ಬೆಳಗ್ಗೆ ಬ್ರೇಕ್ ಫಾಸ್ಟ್ ತಿನ್ನುವುದರಿಂದ ಹಲವು ಲಾಭಗಳು ಇವೆ.
* ಬಹಳ ಜನ ಉದ್ಯೋಗ ಮಾಡುವ ಮಹಿಳೆಯರು ಬೆಳಗ್ಗೆಯ ಆಹಾರದ ಬಗ್ಗೆ ಅಶ್ರದ್ಧೆ ತೋರುತ್ತಾರೆ. ಇದಕ್ಕೆ ಅವರು ಹೇಳುವ ಕಾರಣ ಸಮಯವಿಲ್ಲದಿರುವುದು. ಆದರೆ ಮುಂಜಾನೆಯ ತಿಂಡಿ ಅಗತ್ಯದ ಶಕ್ತಿ ನೀಡುತ್ತದೆ. ದಿನವಿಡೀ ಚುರುಕಾಗಿರುವುದಕ್ಕೆ ಅಡಿಪಾಯ ಹಾಕುತ್ತದೆ.
* ಕೆಲವು ಮಹಿಳೆಯರು ಬೆಳಗ್ಗೆಯ ತಿಂಡಿ ತಿನ್ನದಿದ್ದರೆ ದೇಹ ತೂಕ ಕಡಿಮೆಯಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಇದು ನಿಜವಲ್ಲ. ಮಧ್ಯಾಹ್ನ ಹೆಚ್ಚು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ. ಆದ್ದರಿಂದ ಬೆಳಗ್ಗೆ ಒಂದು ಸ್ಯಾಂಡ್ವಿಚ್ ಆದರೂ ತಿನ್ನಲೇಬೇಕು.
* ರಾತ್ರಿ ಊಟದ ಬಳಿಕ ಬೆಳಗ್ಗೆಯವರೆಗೆ ನಮ್ಮ ಹೊಟ್ಟೆ ಖಾಲಿ ಇರುತ್ತದೆ. ಆದ್ದರಿಂದ ಬೆಳಗ್ಗೆ ಎದ್ದು ಎರಡು ಗಂಟೆಯೊಳಗೆ ಏನಾದರೂ ತಿನ್ನುವುದು ಒಳ್ಳೆಯದು.
* ಮುಂಜಾನೆಯ ಆಹಾರ ಯಾರು ಸೇವಿಸುವುದಿಲ್ಲವೋ ಅವರು ದಿನವಿಡಿ ಆಲಸ್ಯದಿಂದ ಇರುತ್ತಾರೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಕೂಡ ತಗ್ಗುತ್ತದೆ.
* ಶರೀರಕ್ಕೆ ಅಗತ್ಯದ ಶಕ್ತಿ ಸಿಗದ ಹೊರತು ಮೆದುಳು ಕೂಡ ಮಾತು ಕೇಳುವುದಿಲ್ಲ. ಹೀಗಾಗಿ ಯಾವುದೇ ಕೆಲಸದ ಬಗ್ಗೆ ಆಸಕ್ತಿ ಮೂಡುವುದಿಲ್ಲ. ಆದ್ದರಿಂದ ಏನೇ ಕೆಲಸವಿರಲಿ. ಬೆಳಗ್ಗೆ ಏನಾದರೂ ತಿನ್ನುವುದನ್ನು ರೂಢಿ ಮಾಡಿಕೊಳ್ಳಲೇಬೇಕು.