ಆಲೂಗಡ್ಡೆ ಅರ್ಧ ಕಪ್
ಬಟಾಣಿ ಅರ್ಧ ಕಪ್
ಸೋಯಾ ಮೀಲ್ ಮೇಕರ್ 1 1/4 ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1/2 ಚಮಚ
ಅಮಚೂರ್ ಪುಡಿ 1/4 ಚಮಚ
ಗರಂ ಮಸಾಲಾ ಪುಡಿ 1/2 ಚಮಚ
ಧನಿಯಾ ಪುಡಿ 1 ಚಮಚ
ಅಚ್ಚಖಾರದ ಪುಡಿ 1/2 ಚಮಚ
ಕಾಳು ಮೆಣಸಿನ ಪುಡಿ 1/4 ಚಮಚ
ಕಡಲೆ ಹಿಟ್ಟು 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 1/4 ಕಪ್
ಮಾಡುವ ವಿಧಾನ
ಆಲೂಗಡ್ಡೆ ಮತ್ತು ಬಟಾಣಿಯನ್ನು ಬೇರೆ ಬೇರೆಯಾಗಿ ಬೇಯಿಸಿಕೊಳ್ಳಬೇಕು. ಸೋಯಾ ಮೀಲ್ ಮೇಕರ್ ಅನ್ನು ಬಿಸಿ ನೀರಿಗೆ ಹಾಕಿ. ನಂತರ ತೆಗೆದಿಟ್ಟುಕೊಳ್ಳಿ. ಅದರಿಂದ ನೀರನ್ನು ಹಿಂಡಿ ಹಾಕಿ. ನಂತರ ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆದು ಬೇಯಿಸಿದ ಬಟಾಣಿ ಮತ್ತು ಮೀಲ್ ಮೇಕರ್ ಜೊತೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅಮಚೂರ್ ಪುಡಿ, ಗರಂ ಮಸಾಲಾ ಪುಡಿ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಬೇಕು.
ನಂತರ ಇದಕ್ಕೆ ಕಡಲೆ ಹಿಟ್ಟು ಹಾಕಿ ಕಲಸಿಕೊಳ್ಳಬೇಕು. ಒಂದು ವೇಳೆ ಮಿಶ್ರಣ ನೀರಾಗಿದ್ದರೆ ಮತ್ತಷ್ಟು ಕಡಲೆ ಹಿಟ್ಟು ಹಾಕಿ ಗಟ್ಟಿಯಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಆ ಹಿಟ್ಟನ್ನು 10 ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಉಂಡೆಗಳನ್ನು ಅಂಗೈಯಲ್ಲಿಟ್ಟು ಸ್ವಲ್ಪ ತಟ್ಟಿ ಉದ್ದನೆಯ ಕಬ್ಬಿಣದ ಸ್ಟಿಕ್ ಗೆ ಅವುಗಳನ್ನು ಚುಚ್ಚಬೇಕು. (ಕಬಾಬ್ ಮಾಡುವ ಕಂಬಿ ಅಂತಹದ್ದು, ಇದನ್ನು ಚಾಪ್ ಸ್ಟಿಕ್ ಎಂದು ಕೂಡ ಹೇಳಲಾಗುತ್ತೆ)
ನಂತರ ಅದಕ್ಕೆ ಸ್ವಲ್ಪ ಎಣ್ಣೆ ಬಳಿಯಬೇಕು. ಬಳಿಕ 220 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಿದ ಓವನ್ ನಲ್ಲಿ ಇಟ್ಟು 15 ನಿಮಿಷ ಬೇಕ್ ಮಾಡಿಕೊಳ್ಳಬೇಕು.
ಓವೆನ್ ಇಲ್ಲದಿದ್ದರೆ 1 ಗ್ರಿಲ್ ಪ್ಯಾನನ್ನು ಒಲೆಯ ಮೇಲಿಟ್ಟು ಅದರ ಮೇಲೆ ಚಾಪ್ ಸ್ಟಿಕ್ ಇಟ್ಟು ಬೇಯಿಸಿಕೊಳ್ಳಬೇಕು. ಒಂದು ಕಡೆ ಬೆಂದ ನಂತರ ಚಾಪ್ ಸ್ಟಿಕ್ ಅನ್ನು ಮತ್ತೊಂದು ಕಡೆಗೆ ತಿರುಗಿಸಿ ಬೇಯಿಸಿಕೊಳ್ಳಬೇಕು. ಹೀಗೆ ಉಂಡೆಗಳು ಚೆನ್ನಾಗಿ ಎಲ್ಲ ಕಡೆಯೂ ಬೇಯುವಂತೆ ನೋಡಿಕೊಳ್ಳಬೇಕು. ನಂತರ ಪುದೀನಾ ಚಟ್ನಿಯೊಂದಿಗೆ ಇದನ್ನು ಸವಿದರೆ ರುಚಿಯಾಗಿರುತ್ತದೆ.