alex Certify ಮಂಡಿ ನೋವು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ʼಮನೆ ಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡಿ ನೋವು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ʼಮನೆ ಮದ್ದುʼ

ಮಂಡಿ ನೋವಿನಿಂದ ಬಳಲುತ್ತಿದ್ದರೆ ಈ ಮನೆಮದ್ದು ಪ್ರಯೋಗಿಸಿದರೆ ಸಾಕು, ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

* ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಜೇನುತುಪ್ಪದ ಜೊತೆ ರಾತ್ರಿ ಸೇವಿಸಿದರೆ ಮಂಡಿ ಊತ, ನೋವು ಕಡಿಮೆಯಾಗುತ್ತದೆ.

* ಹುರುಳಿ ಕಾಳು ಬೇಯಿಸಿದ ರಸವನ್ನು ನಿಯಮಿತವಾಗಿ ಸೇವಿಸಿದರೆ ಮಂಡಿ ನೋವು ಶಮನವಾಗುತ್ತದೆ.

* ಬೇಲದ ಎಲೆಗಳನ್ನು ಜಜ್ಜಿ ಪೇಸ್ಟ್‌ ಮಾಡಿ ಮಂಡಿ ಮೇಲೆ ಹಚ್ಚಿದರೆ ಊತ ಕಡಿಮೆಯಾಗಿ ನೋವು ನಿವಾರಣೆಯಾಗುತ್ತದೆ.

* ಹಿಪ್ಪಲಿ ಪುಡಿಯನ್ನು ಎಳ್ಳೆಣ್ಣೆಗೆ ಹಾಕಿ ಹಿಪ್ಪಲಿ ಕರಕಲು ಆಗುವ ತನಕ ಕುದಿಸಿ ನಂತರ ಈ ಎಣ್ಣೆಯಿಂದ ಪ್ರತಿ ದಿನ ಮಂಡಿಗಳಿಗೆ ಮಸಾಜ್‌ ಮಾಡಿದರೆ ನೋವು ಕಡಿಮೆಯಾಗುತ್ತದೆ.

* ಮಂಡಿ ಮತ್ತು ದೇಹದ ಇತರ ಸಂಧಿಗಳಲ್ಲಿ ನೋವು ಊತ ಇದ್ದರೆ ಒಂದು ಚಮಚ ಚಕ್ಕೆ ಪುಡಿಗೆ ಎರಡು ಚಮಚ ಜೇನುತುಪ್ಪ ಕಲಸಿ ಸೇವಿಸಿದರೆ ನೋವು ಗುಣವಾಗುತ್ತದೆ.

* ಕರ್ಪೂರದ ಎಣ್ಣೆಯಿಂದ ಪ್ರತಿದಿನ ಮಂಡಿಯನ್ನು ಮಸಾಜ್‌ ಮಾಡಿದರೆ ಊತ, ನೋವು ಶಮನವಾಗುತ್ತದೆ.

* ಸಂಧಿಗಳಲ್ಲಿ ಊತ, ನೋವು ಇದ್ದು ಬೆಳಗ್ಗೆ ಏಳಲು ಆಗದಂತಿದ್ದರೆ ಗೋಮೂತ್ರಕ್ಕೆ ಶುಂಠಿ ಪುಡಿ ಸೇರಿಸಿ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.

* ಬಜೆಯನ್ನು ಬಿಸಿ ನೀರಲ್ಲಿ ತೇದು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.

* ಸಾಸಿವೆಯನ್ನು ಪೇಸ್ಟ್‌ ಮಾಡಿ ಒಂದು ಬಟ್ಟೆಗೆ ಸವರಿ ನೋವಿರುವ ಮಂಡಿಗೆ ಕಟ್ಟಿ 5 ರಿಂದ 6 ಗಂಟೆ ಕಾಲ ಬಿಟ್ಟು ನಂತರ ಸ್ನಾನ ಮಾಡಿದರೆ ನೋವು ಶಮನವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...