
ಮನೆ ಮುಂದೆ ಜಾಗವಿದ್ರೆ ದೊಡ್ಡ ದೊಡ್ಡ ಮರಗಳನ್ನು ಬೆಳೆಸಲು ಅವಕಾಶ ಸಿಗುತ್ತದೆ. ನಗರ ಪ್ರದೇಶದಲ್ಲಿ ಫ್ಲಾಟ್ ನಲ್ಲಿ ವಾಸವಾಗಿರುವವರು ಮನೆ ಬಾಲ್ಕನಿಯಲ್ಲಿ ಸಣ್ಣಪುಟ್ಟ ಗಿಡ ಬೆಳೆಸಿಕೊಂಡಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವೊಂದು ಗಿಡಗಳು ಮನೆಯ ಸುಖ – ಸಂತೋಷವನ್ನು ಹಾಳು ಮಾಡುತ್ತವೆ. ಹಾಗೆ ಕೆಲ ಗಿಡಗಳು ಆರೋಗ್ಯದಿಂದ ಹಿಡಿದು ಆರ್ಥಿಕ ವೃದ್ಧಿ ಮಾಡುತ್ತವೆ.
ಹಸಿರು ಗಿಡಗಳು ಮನಸ್ಸನ್ನು ಸಂತೋಷಗೊಳಿಸುವ ಜೊತೆಗೆ ಆರೋಗ್ಯ ವೃದ್ಧಿ ಕೆಲಸ ಮಾಡುತ್ತವೆ. ಮನೆಯಲ್ಲಿ ಗಿಡ ನೆಡುವ ಮೊದಲು ಕೆಲವೊಂದು ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮನೆಯಲ್ಲಿ ಎಂದೂ ಬೋನ್ಸಾಯಿ ಗಿಡವನ್ನು ನೆಡಬಾರದು. ವಾಸ್ತು ಪ್ರಕಾರ ಈ ಗಿಡ ಒಳ್ಳೆಯದಲ್ಲ.
ಯಾವ ಗಿಡದಿಂದ ಹಾಲಿನಂತಹ ದ್ರವ ಹೊರಗೆ ಬರುತ್ತದೆಯೋ ಆ ಗಿಡಗಳನ್ನು ಬೆಳೆಸಬಾರದು. ಮುಳ್ಳಿನ ಗಿಡಗಳಿಂದಲೂ ದೂರವಿರಬೇಕು. ಮನೆಯ ಮುಂದೆ ಜಾಗವಿದ್ರೆ ತೆಂಗಿನ ಗಿಡವನ್ನು ಬೆಳೆಸಬೇಕು. ಇದು ಬಹಳ ಒಳ್ಳೆಯದು. ಮನೆಯ ಮುಂದೆ ಎಂದೂ ಅಶ್ವತ್ಥ ಗಿಡವಿರಬಾರದು. ಅದ್ರಲ್ಲಿ ಭೂತ-ಪ್ರೇತಗಳ ವಾಸವಿರುತ್ತದೆ ಎಂದು ನಂಬಲಾಗಿದೆ.
ಮನೆಯ ಮಕ್ಕಳು ವಿದ್ಯೆಯಲ್ಲಿ ಹಿಂದೆ ಬಿದ್ದಿದ್ದರೆ, ಪ್ರತಿಭಾವಂತರಿಲ್ಲದೆ ಹೋದ್ರೆ ಅಶೋಕ ಮರವನ್ನು ಬೆಳೆಸಬೇಕು.
ಚೆಂಡು ಹೂವಿನ ಗಿಡವನ್ನು ಮನೆಯಲ್ಲಿ ಅವಶ್ಯವಾಗಿ ಬೆಳಸಿ. ಗುರು ಗ್ರಹವನ್ನು ಇದು ಬಲಪಡಿಸುತ್ತದೆ. ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಸಂತಾನ ಸುಖ ಪ್ರಾಪ್ತಿಯಾಗುತ್ತದೆ.