
ಕೆಲವರಿಗೆ ಕೆಲ ಆಹಾರ ಎದೆ ಉರಿ ತರಿಸುತ್ತದೆ. ಕೆಲವರಿಗೆ ಮೂಲಂಗಿ ಆಗುವುದಿಲ್ಲ, ಮತ್ತೆ ಕೆಲವರಿಗೆ ಅವಲಕ್ಕಿ, ಉಪ್ಪಿಟ್ಟು ತಿಂದ ನಂತರ ಎದೆ ಉರಿ ಶುರುವಾಗುತ್ತದೆ.
ಕಾರಣ ಗ್ಯಾಸ್ಟ್ರಿಕ್ ಅಥವಾ ಫುಡ್ ಅಲರ್ಜಿ ಇರಬಹುದು. ಗೊತ್ತಿಲ್ಲದೆ ಕಾಣಿಸಿಕೊಳ್ಳುವ ಎದೆ ಉರಿಯನ್ನು ತಡೆಗಟ್ಟಲು ಈ ಟಿಪ್ಸ್ ಅನುಸರಿಸಿ.
* ಬೀಜ ಬಲಿಯದ ಸೀಬೆಕಾಯಿಯ ಕಷಾಯ ಮಾಡಿ ಮಜ್ಜಿಗೆಯೊಂದಿಗೆ ಸೇರಿಸಿ ಕುಡಿದರೆ ಎದೆ ಉರಿ ಕಡಿಮೆಯಾಗುತ್ತದೆ.
* ಒಂದು ದೊಡ್ಡ ಬಟ್ಟಲು ತಣ್ಣೀರು ಮತ್ತು ನಿಂಬೆರಸವನ್ನು ಒಂದು ವಾರದವರೆಗೆ ಕುಡಿಯುತ್ತಿದ್ದರೆ ಎದೆ ಉರಿ ಕಡಿಮೆಯಾಗುತ್ತದೆ.
* ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ, ನೀರಿನಲ್ಲಿ ನೆನೆ ಹಾಕಬೇಕು. ಆನಂತರ ಚೆನ್ನಾಗಿ ಕಿವಿಚಿ ಶೋಧಿಸಿ. ಈ ಕಷಾಯಕ್ಕೆ ಹಾಲು, ಸಕ್ಕರೆ ಸೇರಿಸಿ ಆಗಾಗ ಕುಡಿಯುತ್ತಿದ್ದರೆ ಎದೆ ಉರಿ ಕಾಡುವುದಿಲ್ಲ.
* ಕೊತ್ತಂಬರಿ ಸೊಪ್ಪನ್ನು ಎಳನೀರಿನೊಂದಿಗೆ ರುಬ್ಬಿ, ಕಲ್ಲು ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ, ದಿನಕ್ಕೆ ಒಂದು ಬಾರಿ ಕುಡಿಯುತ್ತಿದ್ದರೆ ಎದೆ ಉರಿ ಕಡಿಮೆ ಆಗುತ್ತದೆ.
* ದಾಳಿಂಬೆ ಹಣ್ಣನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಕೆಮ್ಮು ಸಹಿತ ಉಂಟಾಗುವ ಎದೆ ನೋವು, ಎದೆ ಉರಿ ಬರುವುದಿಲ್ಲ. ಸಾಧ್ಯವಾದರೆ ವಾರಕ್ಕೆ ಮೂರು ದಿನವಾದರೂ ದಾಳಿಂಬೆ ಹಣ್ಣು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.