alex Certify ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತೆ ಬ್ರೌನ್ ರೈಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತೆ ಬ್ರೌನ್ ರೈಸ್‌

ಆಹಾರ ಪದಾರ್ಥಗಳನ್ನು ತಯಾರಿಸುವಾಗ ಅತಿಯಾಗಿ ಬಳಸುವುದು ಅಕ್ಕಿಯೇ. ಅದರಲ್ಲಿಯೂ ಕಂದು ಅಕ್ಕಿಯು ದೇಹಕ್ಕೆ ಬೇಕಾದ ಜೀವಕಾಂಶಗಳನ್ನು, ಫೈಬರ್, ಖನಿಜಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.

* ಬ್ರೌನ್ ಅಕ್ಕಿಯು ಆಮ್ಲಜನಕ ಮುಕ್ತ ರಾಡಿಕಲ್‌ ಗಳಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.

* ಬ್ರೌನ್ ಅಕ್ಕಿಯಲ್ಲಿ ತೌಡಿನ ಅಂಶ ಇರುವುದರಿಂದ ಇದನ್ನು ಸೇವಿಸುವುದರಿಂದ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ.

* ಬ್ರೌನ್ ಅಕ್ಕಿಯಲ್ಲಿ ಕರಗುವ ಫೈಬರ್‌ ನ ಅಂಶವಿರುವುದರಿಂದ ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ನೆರವಾಗುತ್ತದೆ.

* ಬ್ರೌನ್ ಅಕ್ಕಿಯನ್ನು ಸೇವಿಸುವುದರಿಂದ ಬೊಜ್ಜನ್ನು ಇಳಿಸಲು ಸಹಕಾರಿಯಾಗಿದೆ.

* ಬ್ರೌನ್ ಅಕ್ಕಿಯು ದೇಹಕ್ಕೆ ಬೇಕಾಗುವ ಒಳ್ಳೆಯ ಕೊಲೆಸ್ಟ್ರಾಲ್‌ ನ್ನು ಹೆಚ್ಚಿಸುತ್ತದೆ.

* ಬ್ರೌನ್ ಅಕ್ಕಿಯಲ್ಲಿರುವ ಎಣ್ಣೆ ಅಂಶವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

* ಬ್ರೌನ್ ಅಕ್ಕಿಯಲ್ಲಿ ಮ್ಯಾಂಗನೀಸ್ ಅಂಶವು ಇರುವುದರಿಂದ ಇದನ್ನು ಸೇವಿಸುವುದರಿಂದ ನಾಡಿ ವ್ಯವಸ್ಥೆಯು ಚೆನ್ನಾಗಿ ಕೆಲಸ ಮಾಡುತ್ತದೆ.

* ಬ್ರೌನ್ ಅಕ್ಕಿಯ ಸೇವನೆಯಿಂದ ಮಿದುಳು ಚುರುಕಾಗುವುದಲ್ಲದೇ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ.

* ಬ್ರೌನ್ ಅಕ್ಕಿಯನ್ನು ಹಾಲುಣಿಸುವ ತಾಯಂದಿರು ಸೇವಿಸುವುದರಿಂದ ಅವರಲ್ಲಿ ಮನೋಭಾವದ ತೊಂದರೆಗಳು, ಖಿನ್ನತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ.

* ಬ್ರೌನ್ ಅಕ್ಕಿಯಲ್ಲಿ ಸೆಲೆನಿಯಂ ಎಂಬ ಪೋಷಕ ಪದಾರ್ಥವು ಹೇರಳವಾಗಿರುವುದರಿಂದ ಹೃದ್ರೋಗಗಳು, ಕ್ಯಾನ್ಸರ್ ಮತ್ತು ಕೀಲು ನೋವು ಬರದಂತೆ ಕಾಪಾಡುತ್ತದೆ.

* ಬ್ರೌನ್ ಅಕ್ಕಿಯಲ್ಲಿರುವ ಮ್ಯಾಂಗನೀಸ್ ಅಂಶವು ಸಂತಾನೋತ್ಪತ್ತಿ ಮತ್ತು ನರಮಂಡಲ ವ್ಯವಸ್ಥೆಗೆ ಬಹಳ ಒಳ್ಳೆಯದು.

* ಬ್ರೌನ್ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ಕರಗುವುದರಿಂದ ಇದು ಶುಗರ್ ಅಂಶವನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ.

* ಬ್ರೌನ್ ಅಕ್ಕಿಯಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಅಂಶವು ಅಧಿಕ ಪ್ರಮಾಣದಲ್ಲಿರುವುದರಿಂದ ಆರೋಗ್ಯಕ್ಕೆ ಪೌಷ್ಟಿಕಾಂಶವಾಗಿ ಕೆಲಸ ಮಾಡುತ್ತದೆ.

* ಅಕ್ಸಿಡೇಶನ್‌ ನಿಂದಾಗುವ ರೋಗಗಳನ್ನು ತಡೆಯುವ ಶಕ್ತಿ ಬ್ರೌನ್ ಅಕ್ಕಿಗಿದೆ.

* ಬ್ರೌನ್ ಅಕ್ಕಿಯು ನಿದ್ರಾಹೀನತೆಯನ್ನು ಕಡಿಮೆಗೊಳಿಸುತ್ತದೆ.

* ಬ್ರೌನ್ ಅಕ್ಕಿಯಲ್ಲಿರುವ ಮೆಗ್ನಿಸಿಯಂ ಅಂಶವು ಎಲುಬುಗಳ ನಿರ್ವಹಣೆಗೆ ಸಹಕಾರಿಯಾಗಿದೆ.

* ಬ್ರೌನ್ ಅಕ್ಕಿಯಲ್ಲಿ ಫೈಬರ್ ಅಂಶಗಳು ಇರುವುದರಿಂದ ಇದು ಗ್ಯಾಸ್, ಅಜೀರ್ಣ, ಅಸಿಡಿಟಿ, ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

* ಬ್ರೌನ್ ಅಕ್ಕಿಯಲ್ಲಿ ಸೆಲೆನಿಯಂ ಅಂಶವಿರುವುದರಿಂದ ಕ್ಯಾನ್ಸರ್, ವಾತ ಮತ್ತು ಹೃದಯದ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ.

* ಬ್ರೌಸ್ ಅಕ್ಕಿಯಲ್ಲಿ ಇರುವ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಸ್ತನ ಕ್ಯಾನ್ಸರ್ ಮತ್ತು ಲುಕೇಮಿಯಾದಂತಹ ಖಾಯಿಲೆ ಬರದಂತೆ ತಡೆಗಟ್ಟುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...