ಮದುವೆಯಾದ ಆರಂಭ ದಿನಗಳಲ್ಲಿ ಹೆಚ್ಚು ಪ್ರೀತಿ ತೋರ್ಪಡಿಸುವ ಜೋಡಿ ದಿನ ಕಳೆದಂತೆ ರೊಮ್ಯಾನ್ಸ್ ಮರೆತು ಬಿಡ್ತಾರೆ. ದಾಂಪತ್ಯವನ್ನು ಗಟ್ಟಿಯಾಗಿರಿಸಿಕೊಳ್ಳಲು, ಸಂಬಂಧ ತಾಜಾ ಆಗಿರಲು ರೊಮ್ಯಾನ್ಸ್ ಅತ್ಯಗತ್ಯ. ಸದಾ ಅಪ್ಪಿ, ಮುದ್ದಾಡಬೇಕೆಂಬ ನಿಯಮವಿಲ್ಲ.
ಒಂದು ಕಿಸ್, ಒಂದೇ ಸಂದೇಶ ಇಡೀ ದಿನ ಸಂಗಾತಿ ಮುಖದಲ್ಲಿ ನಗು ಮೂಡಿರಲು ಕಾರಣವಾಗುತ್ತದೆ. ಒಂದು ಮುತ್ತಿಗೆ ಕೇವಲ 6 ಸೆಕೆಂಡ್ ಸಾಕು.
ದಿನ ಪೂರ್ತಿ ಬ್ಯುಸಿಯಿದ್ದು, ಫೋನ್ ಮಾಡಿ, ಪ್ರೀತಿ ಮಾತನಾಡಲು ಸಮಯವಿಲ್ಲವೆಂದಾದ್ರೆ ಒಂದು ಪ್ರೀತಿಯ ಸಂದೇಶವನ್ನು ಮರೆಯದೆ ಕಳುಹಿಸಿ. ಇದು ಪತಿಗೆ ಮಾತ್ರ ಸೀಮಿತವಲ್ಲ. ಪತ್ನಿ ಕೂಡ ಒಂದು ಸಂದೇಶ ಕಳುಹಿಸಿ, ಒತ್ತಡದಲ್ಲಿರುವ ಪತಿ ಮನಸ್ಸಿಗೆ ಸ್ವಲ್ಪ ನೆಮ್ಮದಿ ನೀಡಬಹುದು.
ಪತಿಯಾದವನು ಇಡೀ ವಾರ ಬ್ಯುಸಿಯಿದ್ರೆ ಭಾನುವಾರ ಒಂದು ಸಮಯದ ಅಡುಗೆಯನ್ನು ಪತ್ನಿಗೆ ಮಾಡಿ ಬಡಿಸಿ. ಇಲ್ಲವಾದ್ರೆ ಅಡುಗೆ ವಿಷ್ಯದಲ್ಲಿ ಪತ್ನಿಗೆ ನೆರವಾಗಿ.
ಧಾರಾವಾಹಿ, ಕ್ರಿಕೆಟ್ ನೋಡುವ ಗಲಾಟೆ ಬೇಡ. ಒಬ್ಬರು ಹೊಂದಾಣಿಕೆ ಮಾಡಿಕೊಳ್ಳಿ. ಇಬ್ಬರು ಒಟ್ಟಿಗೆ ಕುಳಿತು ಧಾರಾವಾಹಿ ನೋಡುವುದ್ರಲ್ಲೂ ಮಜವಿದೆ. ಇಲ್ಲವಾದ್ರೆ ಮೊಬೈಲ್ ನಲ್ಲಿ ಬೇರೆ ಯಾವುದಾದ್ರೂ ಶೋ ವೀಕ್ಷಣೆ ಮಾಡಿ.
ಪ್ರತಿ ಬಾರಿ ಉಡುಗೊರೆ ನೀಡಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಉಡುಗೊರೆ ಬದಲು ಹೂವನ್ನು ನೀಡಿ. ಅಂಗಡಿಯಿಂದ ಖರೀದಿ ಮಾಡಿ ತರಲು ಸಾಧ್ಯವಾಗದೆ ಹೋದಲ್ಲಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿ.