ಶನಿವಾರ ಬೆಳಿಗ್ಗೆ ಈ ವಸ್ತುಗಳು ಕಣ್ಣಿಗೆ ಬಿದ್ರೆ ʼಅದೃಷ್ಟʼ ಬದಲಾದಂತೆ

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ವಾರದ ಏಳೂ ದಿನವನ್ನು ಒಂದೊಂದು ದೇವತೆಗಳಿಗೆ ಅರ್ಪಣೆ ಮಾಡಲಾಗಿದೆ. ಅದ್ರಲ್ಲೂ ಶನಿವಾರಕ್ಕೆ ವಿಶೇಷ ಮಹತ್ವವಿದೆ. ಶನಿವಾರ ಶನಿದೇವನಿಗೆ ಪೂಜೆ ಮಾಡಲಾಗುತ್ತದೆ. ಕೋಪದ ದೇವರು ಶನಿ ಕೃಪೆಗೆ ಪಾತ್ರರಾಗಲು ಭಕ್ತರು ಹರಸಾಹಸ ಪಡ್ತಾರೆ.

ಸಾಡೆಸಾತ್ ಶನಿ ಇದ್ದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅಂತವರು ಶನಿಯ ವಿಶೇಷ ಆರಾಧನೆ ಮಾಡಬೇಕಾಗುತ್ತದೆ. ಶನಿವಾರ ವಿಶೇಷ ಪೂಜೆ, ವೃತದ ಜೊತೆ ಶನಿವಾರ ಬೆಳಿಗ್ಗೆ ಕೆಲವೊಂದು ವಸ್ತುಗಳು ಕಣ್ಣಿಗೆ ಬಿದ್ರೆ ಶುಭಕರ.

ಕಪ್ಪು ನಾಯಿ ಮೇಲೆ ಶನಿ ಸವಾರಿ ಮಾಡ್ತಾನೆ ಎಂದು ನಂಬಲಾಗಿದೆ. ಶನಿಯ ಪ್ರಿಯ ವಾಹನವಿದು. ಶನಿವಾರ ಬೆಳಿಗ್ಗೆ ಕಪ್ಪು ನಾಯಿ ಕಣ್ಣಿಗೆ ಬಿದ್ರೆ ಶುಭ ಸಂಕೇತ. ಯಾವ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗ್ತಿದ್ದೀರೋ ಆ ಕೆಲಸ ಸುಲಭವಾಗಲಿದೆ ಎಂದರ್ಥ. ಸಾಧ್ಯವಾದ್ರೆ ಕಪ್ಪು ನಾಯಿಗೆ ತುಪ್ಪ, ರೊಟ್ಟಿ ನೀಡಿ.

ಬಡವರಿಗೆ, ನಿರ್ಗತಿಕರಿಗೆ ಭಿಕ್ಷೆ ನೀಡುವುದು ಪುಣ್ಯದ ಕೆಲಸ. ಅದ್ರಲ್ಲೂ ಶನಿವಾರ ಬೆಳಿಗ್ಗೆ ಬಿಕಾರಿ ನಿಮ್ಮ ಮನೆ ಮುಂದೆ ಬಂದ್ರೆ ಸಾಧ್ಯವಾದಷ್ಟು ದಾನ ಮಾಡಿ. ಶನಿ ಕೃಪೆ ನಿಮ್ಮ ಮೇಲೆ ಬೀಳಲಿದೆ ಎಂದರ್ಥ.

ಶನಿವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೋಗುವ ವೇಳೆ ಸ್ವಚ್ಛತೆ ಮಾಡುವ ವ್ಯಕ್ತಿ ಕೈನಲ್ಲಿ ಪೊರಕೆ ಹಿಡಿದು ನಿಂತಿದ್ದರೆ ಕೆಲಸ ಫಲ ನೀಡಲಿದೆ ಎಂದರ್ಥ. ನೀವು ಯಾವ ಕೆಲಸಕ್ಕೆ ಹೊರಟ್ಟಿದ್ದೀರೋ ಅದು ಯಶಸ್ವಿಯಾಗಲಿದೆ ಎಂಬುದರ ಸಂಕೇತ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read