ದೇವಾನುದೇವತೆಗಳ ಪೂಜೆಗೆ ಬೇರೆ ಬೇರೆ ಲೋಹಗಳ ಪಾತ್ರೆಗಳನ್ನು ನಾವು ಬಳಸ್ತೇವೆ. ಕೆಲವರು ದೇವರ ಪೂಜೆಗೆ ಸ್ಟೀಲ್ ಪಾತ್ರೆಗಳನ್ನು ಬಳಸ್ತಾರೆ. ಆದ್ರೆ ಶಾಸ್ತ್ರದ ಪ್ರಕಾರ ಇದು ಶುಭವಲ್ಲ. ಪೂಜೆಗೆ ಯಾವ ಲೋಹವನ್ನು ನಿಷೇಧಿಸಲಾಗಿದೆಯೋ ಆ ಲೋಹದ ಪಾತ್ರೆಗಳನ್ನು ಬಳಸಬಾರದು. ಮಾಡಿದ ಪೂಜೆ ಫಲ ನೀಡುವುದಿಲ್ಲ.
ಬೇರೆ ಬೇರೆ ಲೋಹಗಳು ಬೇರೆ ಬೇರೆ ಫಲವನ್ನು ನೀಡುತ್ತವೆ. ಇದಕ್ಕೆ ಧಾರ್ಮಿಕ ಕಾರಣದ ಜೊತೆ ವೈಜ್ಞಾನಿಕ ಕಾರಣವೂ ಇದೆ. ಶಾಸ್ತ್ರದ ಪ್ರಕಾರ, ಚಿನ್ನ, ಬೆಳ್ಳಿ, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು ದೇವರ ಪೂಜೆಗೆ ಶುಭಕರ. ಕಬ್ಬಿಣ ಮತ್ತು ಅಲ್ಯೂಮಿನಿಯಂ, ಸ್ಟೀಲ್, ಉಕ್ಕಿನ ಪಾತ್ರೆಗಳು ಅಶುಭ.
ಕಬ್ಬಿಣ ಮತ್ತು ಅಲ್ಯೂಮಿನಿಯಂ, ಸ್ಟೀಲ್, ಉಕ್ಕಿನ ದೇವರ ಮೂರ್ತಿ ಪೂಜೆ ಕೂಡ ಮಾಡಬಾರದು. ಕಬ್ಬಿಣದ ಪಾತ್ರೆಗೆ ನೀರು ಹಾಕಿದಾಗ ಜಂಗು ಬರುತ್ತದೆ. ಮೂರ್ತಿಗಳನ್ನು ಕೈನಲ್ಲಿ ಹಿಡಿದು ಸ್ನಾನ ಮಾಡಿಸಿದಾಗ ಈ ಲೋಹದ ಕೆಟ್ಟ ಅಂಶ ನಮ್ಮ ಚರ್ಮಕ್ಕೆ ಹಾನಿ ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಷಿದ್ಧ ಲೋಹದ ಪಾತ್ರೆಯನ್ನು ಪೂಜೆಗೆ ಬಳಸಿದ್ರೆ ಪೂಜೆ ಯಶಸ್ವಿಯಾಗುವುದಿಲ್ಲ. ಸ್ಟೀಲ್ ಮಾನವ ನಿರ್ಮಿತ ಲೋಹ. ಪೂಜೆಗೆ ನೈಸರ್ಗಿಕ ಲೋಹವನ್ನು ಬಳಕೆ ಮಾಡಬೇಕು. ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ಪೂಜೆ ಮಾಡಿದ್ರೆ ಫಲ ಪ್ರಾಪ್ತಿ ಜೊತೆ ಅನಾರೋಗ್ಯ ಕಾಡುವುದಿಲ್ಲ.