ಬೆಳ್ಳಿ ಹೊಳೆಯುವ ಬಿಳಿ ಲೋಹವಾಗಿದೆ. ದಿನನಿತ್ಯ ಬಳಸುವ ಪ್ರಮುಖ ಲೋಹಗಳಲ್ಲಿ ಬೆಳ್ಳಿ ಕೂಡ ಒಂದು. ಸಾತ್ವಿಕ ಹಾಗೂ ಪವಿತ್ರ ಲೋಹವೆಂದು ಇದನ್ನು ಪರಿಗಣಿಸಲಾಗಿದೆ.
ಶಾಸ್ತ್ರಗಳ ಪ್ರಕಾರ, ಭಗವಂತ ಶಿವನ ಕಣ್ಣುಗಳಿಂದ ಇದು ಹುಟ್ಟಿದೆಯಂತೆ. ಚಂದ್ರ ಹಾಗೂ ಶುಕ್ರನಿಗೆ ಸಂಬಂಧ ಹೊಂದಿದೆ. ದೇಹದ ನೀರು ಮತ್ತು ಕಫವನ್ನು ಬೆಳ್ಳಿ ನಿಯಂತ್ರಿಸುತ್ತದೆ. ಬೆಳ್ಳಿ ಮಧ್ಯ ದಾತುವಾದ ಕಾರಣ ಇದ್ರ ಬಳಕೆ ಹೆಚ್ಚು.
ಬೆಳ್ಳಿಯ ಉಂಗುರವನ್ನು ಕೊನೆ ಬೆರಳಿಗೆ ಹಾಕುವುದು ಶುಭಕರ. ಇದ್ರಿಂದ ಅಶುಭ ಚಂದ್ರ ಶುಭ ಫಲ ನೀಡಲು ಶುರು ಮಾಡ್ತಾನೆ. ಮನಸ್ಸು ಸಮತೋಲನಕ್ಕೆ ಬರುತ್ತದೆ.
ಬೆಳ್ಳಿ ಸರವನ್ನು ಕತ್ತಿಗೆ ಹಾಕಿಕೊಳ್ತಾರೆ. ಇದ್ರಿಂದ ಭಾಷೆ ಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಹಾರ್ಮೋನ್ ಸಮತೋಲನಕ್ಕೆ ಬರುತ್ತದೆ. ಭಾಷೆ ಹಾಗೂ ಮನಸ್ಸು ಕೇಂದ್ರೀಕೃತಗೊಳ್ಳುತ್ತದೆ.
ಶುದ್ಧ ಬೆಳ್ಳಿ ಧಾರಣೆ ಮಾಡುವುದ್ರಿಂದ ವಾತ, ಪಿತ್ತ, ಕಫ ನಿಯಂತ್ರಣಕ್ಕೆ ಬರುತ್ತದೆ. ದೇಹ ಆರೋಗ್ಯಕರವಾಗಿರುತ್ತದೆ.
ಬೆಳ್ಳಿ ಪಾತ್ರೆಯಲ್ಲಿ ನೀರು ಕುಡಿಯುವುದ್ರಿಂದ ಶೀತ, ನೆಗಡಿ, ಜ್ವರ ಕಾಡುವುದಿಲ್ಲ.
ಬೆಳ್ಳಿ ಚಮಚದಲ್ಲಿ ಶುದ್ಧ ಜೇನುತುಪ್ಪ ಸೇವನೆ ಮಾಡುವುದ್ರಿಂದ ದೇಹ ವಿಷದಿಂದ ಮುಕ್ತಿ ಹೊಂದುತ್ತದೆ.
ಶುದ್ಧ ಬೆಳ್ಳಿ ಲೋಟದಲ್ಲಿ ಪಂಚಾಮೃತವನ್ನು ಶಿವನಿಗೆ ಅರ್ಪಣೆ ಮಾಡಿದ್ರೆ ಅನಾರೋಗ್ಯ ದೂರವಾಗುತ್ತದೆ. ಮನಸ್ಸು ಶಾಂತವಾಗುತ್ತದೆ.
ಬೆಳ್ಳಿ ಬಳಸುವಾಗ ಶುದ್ಧತೆ ಬಗ್ಗೆ ಗಮನ ನೀಡಬೇಕು. ಹೆಚ್ಚು ಶುದ್ಧ ಬೆಳ್ಳಿ ಹೆಚ್ಚು ಲಾಭಕರ.
ಬಂಗಾರ ಬಿಟ್ಟು, ಬೆಳ್ಳಿ ಜೊತೆ ಬೇರೆ ಯಾವುದೇ ಲೋಹವನ್ನು ಸೇರಿಸಬಾರದು.
ಬೆಳ್ಳಿ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆದು ಬಳಸಬೇಕು.
ಕರ್ಕ, ವೃಶ್ಚಿಕ ಹಾಗೂ ಮೀನ ರಾಶಿಯವರಿಗೆ ಬೆಳ್ಳಿ ಒಳ್ಳೆಯದು.
ಮೇಷ, ಸಿಂಹ, ಧನು ರಾಶಿಯವರು ಬೆಳ್ಳಿ ಧಾರಣೆ ಮಾಡದೆ ಹೋದ್ರೆ ಒಳ್ಳೆಯದು.
ಉಳಿದ ರಾಶಿಯವರಿಗೆ ಬೆಳ್ಳಿ ಸಾಮಾನ್ಯ ಫಲ ನೀಡುತ್ತದೆ.