ಮನೆಯಲ್ಲಿ ಸದಾ ಖುಷಿ ನೆಲೆಸಿರಲಿ ಎಂದು ಎಲ್ಲರೂ ಬಯಸ್ತಾರೆ. ಮನೆ ಸಂತೋಷದಿಂದಿರಬೇಕೆಂದು ಕೈಲಾದ ಪ್ರಯತ್ನ ಮಾಡ್ತಾರೆ. ಕೆಲವೊಮ್ಮೆ ಎಷ್ಟು ಪ್ರಯತ್ನ ಪಟ್ಟರೂ ಪ್ರಯೋಜನವಾಗುವುದಿಲ್ಲ. ವಾಸ್ತುದೋಷ ಇದಕ್ಕೆ ಕಾರಣವಾಗುತ್ತದೆ. ಶಾಸ್ತ್ರದಲ್ಲಿ ಮನೆಯಲ್ಲಿ ಸಂತೋಷ ನೆಲೆಸಿರಲು ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ.
ನಿಮ್ಮ ಮನೆ ಸದಸ್ಯರು ಸದಾ ನಗ್ತಾ, ಖುಷಿಯಾಗಿರಬೇಕೆಂದ್ರೆ ಆರತಿ ಮಾಡುವ ವೇಳೆ ದೀಪಕ್ಕೆ 2 ಲವಂಗವನ್ನು ಹಾಕಿ. ಇದ್ರಿಂದ ಎಲ್ಲ ಕೆಲಸ ಸುಗಮವಾಗಲಿದೆ. ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಮನೆಯಲ್ಲಿ ಸಂತೋಷದ ಜೊತೆ ಆರ್ಥಿಕ ವೃದ್ಧಿ ಬಯಸುವವರು ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ, ಅದಕ್ಕೆ ಲವಂಗ ಹಾಕಿ, ಹನುಮಂತನಿಗೆ ಆರತಿ ಬೆಳಗಿ.
ಮನೆಯಲ್ಲಿ ವಾಸ್ತು ದೋಷವಿದ್ದರೆ ಕರ್ಪೂರವನ್ನು ಪ್ರತಿ ದಿನ ಹಚ್ಚಿ. ಕರ್ಪೂರದ ಹೊಗೆಯನ್ನು ಮನೆಗೆಲ್ಲ ತೋರಿಸಿ.
ಪ್ರತಿ ಕೆಲಸದಲ್ಲಿ ಯಶಸ್ಸು, ಆರ್ಥಿಕ ವೃದ್ಧಿ ಬಯಸುವವರು ನೀವಾಗಿದ್ದರೆ ರಾತ್ರಿ ಅಡುಗೆ ಮನೆಯಲ್ಲಿ ಬೆಳ್ಳಿ ಪಾತ್ರೆಗೆ ಕರ್ಪೂರ ಹಾಗೂ ಲವಂಗ ಹಾಕಿಡಿ. ಹೀಗೆ ಮಾಡಿದ್ರೆ ಎಂದೂ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ.
ಮದುವೆಯಲ್ಲಿ ವಿಳಂಬವಾಗ್ತಿದ್ದರೆ ಲವಂಗ, ಕರ್ಪೂರದ ಜೊತೆ ಅರಿಶಿನ, ಅಕ್ಕಿಯನ್ನು ತಾಯಿ ದುರ್ಗಾ ಪೂಜೆ ವೇಳೆ ಬಳಸಿ. ಹವನದ ವೇಳೆ ಆಹುತಿ ಹಾಕಿ. ಇದ್ರಿಂದ ಮದುವೆ ಶೀಘ್ರವೇ ನೆರವೇರಲಿದೆ.