ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ವಿಷ್ಯದ ಬಗ್ಗೆಯೂ ವಿವರವಾಗಿ ಹೇಳಲಾಗಿದೆ. ಪ್ರತಿಯೊಂದು ಘಟನೆ, ವಸ್ತುಗಳ ಬಗ್ಗೆಯೂ ಶಾಸ್ತ್ರದಲ್ಲಿ ಹೇಳಲಾಗಿದೆ. ಕೈನಿಂದ ಊಟದ ತಟ್ಟೆ ಬಿದ್ರೆ, ಒಲೆ ಮೇಲಿರುವ ಹಾಲು ಉಕ್ಕಿದ್ರೆ ಶಾಸ್ತ್ರದ ಪ್ರಕಾರ ಶುಭವಲ್ಲ. ಯಾವ ಮಸಾಲೆ ಪದಾರ್ಥಗಳು ಬಿದ್ರೆ ಅಶುಭ, ಯಾವುದು ಶುಭ ಎಂಬುದನ್ನೂ ಹೇಳಲಾಗಿದೆ.
ಹಾಲನ್ನು ಚಂದ್ರನಿಗೆ ಹೋಲಿಕೆ ಮಾಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಲೆ ಮೇಲಿಟ್ಟ ಕುದಿಯುತ್ತಿರುವ ಹಾಲು ಉಕ್ಕಿದ್ರೆ ಸುಖ-ಸಮೃದ್ಧಿ ಹಾಳಾಗುತ್ತದೆ ಎಂದರ್ಥ. ಕುಟುಂಬದ ಸದಸ್ಯರ ಮಧ್ಯೆ ಜಗಳಕ್ಕೂ ಇದು ಕಾರಣವಾಗುತ್ತದೆ.
ಹಾಲು ಅಥವಾ ಹಾಲಿನಿಂದ ಮಾಡಿದ ಪದಾರ್ಥ ಕೈ ತಪ್ಪಿ ಕೆಳಗೆ ಬಿದ್ರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎಂದರ್ಥ.
ಕೈನಲ್ಲಿರುವ ಉಪ್ಪು ಕೆಳಗೆ ಬಿದ್ರೆ ಶುಕ್ರ ಹಾಗೂ ಚಂದ್ರ ದುರ್ಬಲರಾಗಿದ್ದಾರೆ ಎಂದರ್ಥ.
ಕಾಳು ಮೆಣಸು ಕೈ ತಪ್ಪಿ ಕೆಳಗೆ ಬಿದ್ರೆ ನಿಕಟ ಸಂಬಂಧಿ ಹಾಗೂ ನಿಮ್ಮ ಮಧ್ಯೆ ಇರುವ ಸಂಬಂಧ ಹಾಳಾಗುತ್ತದೆ.
ಗೋಧಿ, ಅಕ್ಕಿ ಅಥವಾ ಇತರ ಆಹಾರ ಪದಾರ್ಥ ಕೆಳಗೆ ಬಿದ್ರೆ ತಾಯಿ ಅನ್ನಪೂರ್ಣೆ ಮುನಿಸಿಕೊಂಡಿದ್ದಾಳೆ ಎಂದರ್ಥ.
ಬೇಳೆ ಕಾಳುಗಳು ಕೆಳಗೆ ಬಿದ್ರೆ ಅದನ್ನು ಕೈನಲ್ಲಿ ಹಿಡಿದುಕೊಂಡು ಕ್ಷಮೆ ಕೇಳಬೇಕಂತೆ. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಎದುರಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.