ನಾಯಿ ಸಾಕು ಪ್ರಾಣಿ. ನಾಯಿಯನ್ನು ಪ್ರಾಮಾಣಿಕ, ನಂಬಿಕಸ್ತ ಪ್ರಾಣಿ ಎಂದು ನಂಬಲಾಗಿದೆ. ಶಾಸ್ತ್ರಗಳಲ್ಲಿ ಕೂಡ ನಾಯಿಗೆ ದೇವರ ಸ್ಥಾನ ನೀಡಲಾಗಿದೆ. ಆದ್ರೆ ನಾಯಿಗಳ ವರ್ತನೆ ವಿಚಿತ್ರವಾಗಿರುತ್ತವೆ. ಬೀದಿ ನಾಯಿಗಳಿರುವ ಪ್ರದೇಶದಲ್ಲಿ ಕೆಲವೊಮ್ಮೆ ಬೈಕ್ ಚಲಾಯಿಸುವುದೇ ಕಷ್ಟವಾಗುತ್ತದೆ. ಬೈಕ್ ಹಿಂದೆ ಓಡಿ ಬರುವ ನಾಯಿಗಳು ಸವಾರನ ತಲೆನೋವಿಗೆ ಕಾರಣವಾಗುತ್ತದೆ.
ಎಲ್ಲಿಂದಲೋ ಓಡಿ ಬರುವ ನಾಯಿ ಬೈಕ್ ಹಿಂಬಾಲಿಸುತ್ತದೆ. ಬೊಗಳುತ್ತ ಬರುವ ನಾಯಿ ನೋಡಿ ವಾಹನ ಸವಾರ ಕೈ ಬಿಡುವ ಸಾಧ್ಯತೆಯಿರುತ್ತದೆ. ಇದ್ರಿಂದ ಅಪಘಾತಗಳಾಗಿದ್ದೂ ಇದೆ. ಆದ್ರೆ ನಾಯಿ ಏಕೆ ಹೀಗೆ ಮಾಡುತ್ತೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿರುತ್ತದೆ.
ಸಾಮಾನ್ಯವಾಗಿ ನಾಯಿ ಎಲ್ಲ ಬೈಕ್ ಗಳನ್ನು ಹಿಂಬಾಲಿಸುವುದಿಲ್ಲ. ಬೈಕ್ ಟೈರ್ ಗೆ ಬೇರೊಂದು ನಾಯಿ ಮೂತ್ರ ಮಾಡಿದ್ದರೆ ಅಂತ ಬೈಕ್ ಗಳನ್ನು ನಾಯಿ ಹಿಂಬಾಲಿಸುತ್ತದೆ. ಬೇರೆ ನಾಯಿ ವಾಸನೆ ಬರ್ತಿದ್ದಂತೆ ನಮ್ಮ ಪ್ರದೇಶಕ್ಕೆ ಬೇರೊಂದು ನಾಯಿ ಬಂದಿದೆ ಎಂದುಕೊಳ್ಳುವ ಈ ಪ್ರದೇಶದ ನಾಯಿ ಬೈಕ್ ಹಿಂಬಾಲಿಸುತ್ತದೆ. ಸಾಮಾನ್ಯವಾಗಿ ತಮ್ಮ ವ್ಯಾಪ್ತಿಗೆ ಬೇರೆ ನಾಯಿ ಬರೋದನ್ನು ನಾಯಿ ಇಷ್ಟಪಡುವುದಿಲ್ಲ.
ಬೈಕ್ ಮೇಲೆ ಬೆಕ್ಕು ಅಥವಾ ಇನ್ನಾವುದಾದ್ರೂ ಸಣ್ಣ ಪ್ರಾಣಿಗಳ ಚಿತ್ರವಿದ್ದರೂ ನಾಯಿ ಹಿಂಬಾಲಿಸುತ್ತದೆ. ಬೊಗಳಿ ಪ್ರಾಣಿಗಳನ್ನು ಓಡಿಸಲು ಮುಂದಾಗುತ್ತದೆ. ಇದೇ ಕಾರಣಕ್ಕೆ ಬೈಕ್ ಹಿಂದೆ ಓಡುತ್ತದೆ.